Vanasiri :ರಾಜ್ಯ ಪರಿಸರ ಪ್ರಶಸ್ತಿ ಪಡೆದ ಅಮರೇಗೌಡ ಮಲ್ಲಾಪೂರ ಅವರು ಕಾರ್ಯ ಶ್ಲಾಘನೀಯ : ಹಂಪನಗೌಡ ಬಾದರ್ಲಿ


ರಾಜ್ಯ ಪರಿಸರ ಪ್ರಶಸ್ತಿ ಪಡೆದ ಅಮರೇಗೌಡ ಮಲ್ಲಾಪೂರ ಅವರು ಕಾರ್ಯ ಶ್ಲಾಘನೀಯ : ಹಂಪನಗೌಡ ಬಾದರ್ಲಿ

 ಸಿಂಧನೂರು ನಗರದ ನೂತನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರಿಗೆ ಅವರ ನಿವಾಸದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಸಸಿ ನೀಡುವ ಮೂಲಕ ಇಂದು ಸನ್ಮಾನಿಸಿ ಶುಭ ಕೋರಲಾಯಿತು.

ಸಿಂಧನೂರಿನ ಶಾಸಕರ ನಿವಾಸದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಂಧನೂರಿನ ನೂತನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರು  ಪ್ರತಿಯೊಬ್ಬರೂ ಸನ್ಮಾನಗಳನ್ನು ಸಮಾರಂಭಗಳನ್ನು ಶಾಲು ಹಾರ ಹಾಕುವ ಬದಲಿಗೆ ಒಂದು ಸಸಿ ಕೊಟ್ಟು ಶುಭ ಕೋರಬೇಕು.ಯಾಕೆಂದರೆ ಇಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿ ಬಳಕೆ ಯಾಗುತ್ತಿದೆ ಅದರಿಂದ ದೂರವಾಗಲು ನಾವುಗಳೆಲ್ಲರೂ ಯಾವುದೇ ಶುಭ ಸಮಾರಂಭಗಳಿಗೆ ಹೋಗಬೇಕಾದರೆ ಸಸಿಗಳನ್ನು ತೆಗೆದುಕೊಂಡು ಹೋಗಿ ಶುಭ ಕೋರಬೇಕು ಇದರಿಂದ ಪ್ಲಾಸ್ಟಿಕ್ ಬಳಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಪ್ಲಾಸ್ಟಿಕ್ ನಿಷೇಧ ಮಾಡಿದೆ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದರು.ಪರಿಸರ ಸಂರಕ್ಷಣೆ, ಗಿಡಮರಗಳನ್ನು ಉಳುಸಿ ಬೆಳಸುವ ನಿಟ್ಟಿನಲ್ಲಿ ಸಿಂಧನೂರು ವನಸಿರಿ ತಂಡದ ಅಮರೇಗೌಡ ಮಲ್ಲಾಪೂರ ಅವರು ಕಾರ್ಯ ತುಂಬಾ ಶ್ಲಾಘನೀಯ ಅವರ ಈ ಕಾರ್ಯವನ್ನು ಗುರುತಿಸಿ ಈ ವರ್ಷ ನಮ್ಮ ಸರ್ಕಾರದ ವತಿಯಿಂದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ನೀಡಿ ಗೌರವಿದೆ ಇದು ನಮ್ಮ ಸಿಂಧನೂರಿಗೆ ಕೀರ್ತಿ ತಂದಂತಹ ವಿಷಯ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ,ಅವರು ಇನ್ನಷ್ಟು ಹೆಚ್ಚಿನ ಪರಿಸರ ಜಾಗೃತಿ ಕಾರ್ಯಗಳನ್ನ ಮಾಡಲಿ, ಪ್ರತಿಯೊಬ್ಬರೂ ಅಮರೇಗೌಡ ಮಲ್ಲಾಪೂರ ಅವರಂತೆ ಪರಿಸರ ಸಂರಕ್ಷಣೆಯಲ್ಲಿ ತೊಡಗಬೇಕು ಗಿಡಮರಗಳನ್ನು ಹೆಚ್ಚು ಹೆಚ್ಚು ಬೆಳೆಸಬೇಕು ಮತ್ತು ವನಸಿರಿ ಫೌಂಡೇಶನ್ ಗೆ ನನ್ನಿಂದ ಏನಾದರೂ ಸಹಾಯ ಸಹಕಾರ ಬೇಕಾದರೆ ಮಾಡುತ್ತೇನೆ  ಎಂದು ತಿಳಿಸಿದರು.

ನಂತರ ಮಾತನಾಡಿದ ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಸಿಂಧನೂರಿನ ನೂತನ ಶಾಸಕರಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಹಂಪನಗೌಡ ಬಾದರ್ಲಿ ಅವರು ಸಿಂಧನೂರು ನಗರ ಹಚ್ಚ ಹಸಿರಾಗಿಸಲು, ಸ್ವಚ್ಛವಾಗಿಡುವುದಾಗಿ ಮತ್ತು ಜಿಲ್ಲಾ ಕೇಂದ್ರವನ್ನಾಗಿಸಲು ಪಣತೊಟ್ಟಿದ್ದಾರೆ ತುಂಬಾ ಸಂತೋಷದ ವಿಷಯ.ಸದಾಕಾಲ ಹಸಿರು ಶಾಲು ಹಾಕಿಕೊಳ್ಳುವುದು ಶಾಲು ಹಾರಗಳ ಬದಲಿಗೆ ಒಂದೊಂದು ಸಸಿ ಕೊಟ್ಟು ಶುಭ ಕೋರಲು ಕಾರ್ಯಕರ್ತರಿಗೆ ಸೂಸಸಿರುವುದು ಸಂತಸದ ವಿಷಯ.ಪರಿಸರ ಪ್ರೇಮಿಗಳಾಗಿ ಸದಾಕಾಲ ವನಸಿರಿ ತಂಡಕ್ಕೆ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಿದ್ದಾರೆ.ಇಂತಹ ಒಬ್ಬ  ಪರಿಸರ ಪ್ರೇಮಿಗಳನ್ನು ನಾವು ಶಾಸಕರಾಗಿ ಪಡೆದವರು ನಾವೇ ಧನ್ಯರು ಆದ್ದರಿಂದ ಇಂದು ಅವರನ್ನು ವಿಶೇಷವಾಗಿ ಸಸಿಗಳನ್ನು ನೀಡುವ ಮೂಲಕ ಸನ್ಮಾನಿಸಿ ಶುಭಕೋರಲು ಬಂದಿದ್ದೇವೆ ಎಂದು ವನಸಿರಿ ಫೌಂಡೇಶನ್ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಅಮರೇಗೌಡ ಮಲ್ಲಾಪೂರ, ಅಮರಯ್ಯ ಸ್ವಾಮಿ ಪತ್ರಿಮಠ,ಶ್ರೀಮತಿ ದ್ರಾಕ್ಷಾಯಣಿ ಗೋಮರ್ಶಿ,ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ,ರಂಜಾನ್ ಸಾಬ್, ವೆಂಕಟರಡ್ಡಿ ಹಡಗಿನಾಳ, ಚನ್ನಪ್ಪ ಕೆ.ಹೊಸಳ್ಳಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್,ಮಾಂತೇಶ ಉಪ್ಪಾರ,ಅಮರೇಶ ಗುಂಜಳ್ಳಿ ಇನ್ನೂ ಹಲವಾರು ವನಸಿರಿ ಫೌಂಡೇಶನ್ ಸದಸ್ಯರು ಭಾಗಿಯಾಗಿದ್ದರು.

  ಡಿ ಅಲಂಬಾಷಾ  : ವರದಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">