ವನಸಿರಿ ಫೌಂಡೇಶನ್ ರಾಜ್ಯ ಸಹಕಾರ್ಯದರ್ಶಿಯಾಗಿ ರಂಜಾನ್ ಸಾಬ್ ಲೋಹಾರ್ ನೇಮಕ
ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರ ಆದೇಶದ ಮೇರೆಗೆ ವನಸಿರಿ ಫೌಂಡೇಶನ್ ನೂತನ ರಾಜ್ಯ ಸಹ ಕಾರ್ಯದರ್ಶಿಯಾಗಿ "ರಂಜಾನ್ ಸಾಬ್ ಲೋಹಾರ್" ಅವರನ್ನು ನೇಮಕ ಮಾಡಲಾಗಿದೆ ಎಂದು ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ ಅವರು ತಿಳಿಸಿದರು.
ನೂತನವಾಗಿ ಸಹಕಾರ್ಯದರ್ಶಿಯಾಗಿ ನೇಮಕವಾದ ರಂಜಾನ್ ಸಾಬ್ ಲೋಹಾರ್ ಅವರಿಗೆ ವನಸಿರಿ ಫೌಂಡೇಶನ್ ವತಿಯಿಂದ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಸಸಿ ನೀಡಿ ಸನ್ಮಾನಿಸಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ, ಗಿರಿಸ್ವಾಮಿ ಹೆಡಗಿನಾಳ,ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ, ವೆಂಕಟರಡ್ಡಿ ಹೆಡಗಿನಾಳ, ರಾಜು ಬಳಗಾನೂರ, ಇನ್ನಿತರರು ಇದ್ದರು.