ಭೋಪಾಲ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನ ಮೆಚ್ಚುವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಈ ನಾಯಕನಿಗೆ ದೇಶ, ವಿದೇಶಗಳಲ್ಲಿ ಅಭಿಮಾನಿಗಳಿದ್ದಾರೆ. ಹೀಗೆ ಇಲ್ಲೊಬ್ಬಳು ವೃದ್ಧೆ ಮಾತ್ರ ಮೋದಿ ಕುರಿತಾಗಿ ಅಪಾರ ಪ್ರಮಾಣದ ಅಭಿಮಾನ ಇಟ್ಟುಕೊಂಡಿದ್ದಾರೆ.
ಮಧ್ಯಪ್ರದೇಶದ ರಾಜ್‌ಗಢ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ವಾಸವಾಗಿರುವ 100 ವರ್ಷದ ಮಂಗಿಬಾಯಿ ತನ್ವಾರ್ಗೆ, ಪ್ರಧಾನಿ ನರೇಂದ್ರ ಮೋದಿ ಎಂದರೆ ತುಂಬಾ ಇಷ್ಟ. ವೃದ್ಧೆ ಅಭಿಮಾನಿ ಮೋದಿಗಾಗಿ ತನ್ನೆಲ್ಲ ಜಮೀನ್ನು ನೀಡಲು ಮುಂದಾಗಿದ್ದಾರೆ.
ಮಂಗಿಬಾಯಿಗೆ ಮಕ್ಕಳಿಲ್ಲವೇ? ಆಕೆಗೆ ಒಂದಲ್ಲ ಎರಡಲ್ಲ 14 ಮಕ್ಕಳಿದ್ದಾರೆ. ಆದರೆ ನಾನು ಪ್ರಧಾನಿ ನರೇಂದ್ರ ಮೋದಿಯವರನ್ನು ನನ್ನ 15ನೇ ಮಗ ಎಂದು ಪರಿಗಣಿಸುತ್ತೇನೆ. ಅವರು ದೇಶಕ್ಕಾಗಿ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ 25 ಎಕರೆ ಜಮೀನನ್ನು ಮೋದಿಗೆ ನೀಡುತ್ತೇನೆಂದು 100 ವರ್ಷದ ಮಂಗಿಬಾಯಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತಾಗಿ ಮಾತನಾಡಿದ ವೃದ್ಧೆ, ಮೋದಿಯನ್ನು ಟಿವಿಯಲ್ಲಿ ಹಲವು ಬಾರಿ ನೋಡಿದ್ದೇನೆ. ಮೋದಿ ನನಗೆ ಮನೆ ಕೊಟ್ಟರು. ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಮೋದಿ ಅಷ್ಟೊಂದು ಕೊಟ್ಟಿದ್ದರಿಂದ ಹಣ ಉಳಿಸಿ ತೀರ್ಥಯಾತ್ರೆಗೆ ತೆರಳಲು ಸಾಧ್ಯವಾಯಿತು. ಅವಕಾಶ ಸಿಕ್ಕರೆ ಸ್ವತಃ ಮೋದಿಯವರನ್ನು ಭೇಟಿ ಮಾಡುತ್ತೇನೆಂದು ಹೇಳಿದ್ದಾರೆ.
ಮೋದಿ ಯಾಕೆ ಇಷ್ಟ ಎಂದು ಕೇಳಿದರೆ? ವೃದ್ಧೆ, ಮೋದಿ ದೇಶಕ್ಕೆ ಸಾಕಷ್ಟು ಸೇವೆ ಸಲ್ಲಿಸುತ್ತಿದ್ದಾರೆ. ಮೇಲಾಗಿ ತನ್ನ ಬಳಿ 25 ಎಕರೆ ಜಮೀನಿದ್ದು, ಆ ಭೂಮಿಯನ್ನು ಮೋದಿಗೆ ನೀಡುವುದಾಗಿ ಹೇಳುತ್ತಾಳೆ.
ಈ ವರ್ಷದ ಕೊನೆಯಲ್ಲಿ 2023ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಅಧಿಕೃತವಾಗಿ ಪ್ರಾರಂಭಿಸಲು ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಭೋಪಾಲ್ ರೋಡ್ ಶೋನಲ್ಲಿ ಭಾಗವಹಿಸಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ ಎಂದು ವರದಿಯಾಗಿದೆ.