ಕುಕನೂರು ಪಟ್ಟಣದಲ್ಲಿ ಮತ್ತೆ ಕಳ್ಳರ ಹಾವಳಿ,ಬಾರ್ ಗೆ ನುಗ್ಗಿ ಎಣ್ಣೆ ದೋಚಿದ ಖದೀಮರು
ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಮತ್ತೆ ಕಳ್ಳರ ಹಾವಳಿ ಶುರುವಾಗಿದ್ದು ನಿನ್ನೆ ಗುರುವಾರ ರಾತ್ರಿ ಪಟ್ಟಣದ ಎರಡು ಅಂಗಡಿ ಗೆ ಕಳ್ಳರು ನುಗ್ಗಿದ್ದು ನಗದು ಮತ್ತು ಎಣ್ಣೆಯನ್ನು ದೋಚಿ ಪರಾರಿಯಾಗಿದ್ದಾರೆ.
ಕೊಪ್ಪಳ ರಸ್ತೆಯ ಬಾರ್ ವೊಂದರಕ್ಕೆ ನುಗ್ಗಿದ ಕಳ್ಳರು ಬಾರ್ ಅಂಗಡಿಯ ಬೀಗ ಮುರಿದು ನಗದು ಮತ್ತು ಮದ್ಯ ವನ್ನು ಕದ್ದುಕೊಂಡು ಹೋಗಿದ್ದಾರೆ. ಕಳ್ಳತನ ಮಾಡುವ ದೃಶ್ಯವು ಮದ್ಯದ ಅಂಗಡಿಯ ಸಿ ಸಿ ಟಿವಿಯಲ್ಲಿ ಸೆರೆಯಾಗಿದೆ.
ರಾತ್ರಿ 3 ಗಂಟೆಯ ಸುಮಾರಿಗೆ ಮಂಕಿ ಕ್ಯಾಪ್ ಧರಿಸಿ ಅಂಗಡಿಯ ಬೀಗ ಮುರಿದು ಕಳ್ಳತನ ಮಾಡಿದ ದೃಶ್ಯ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.
ಅದೇ ರಸ್ತೆ ಮತ್ತೊಂದು ಕಿರಾಣಿ ಅಂಗಡಿಗೂ ಕಳ್ಳರು ನುಗ್ಗಿ ನಗದು ದೋಚಿದ್ದಾರೆ.ಈ ಕುರಿತು ಅಂಗಡಿಯ ಮಾಲಕರು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದು ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಲು ಪೊಲೀಸರು ಶೋಧ ನಡೆಸಿದ್ದಾರೆ.
ಇತ್ತೀಚಿಗೆ ಕುಕನೂರು ಪಟ್ಟಣದ ವ್ಯಾಪ್ತಿಯಯಲ್ಲಿ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ಸಾರ್ವಜನಿಕರು ನಿದ್ದೆಗೇಡುವಂತೆ ಮಾಡಿದೆ. ಕಳೆದ ತಿಂಗಳು ಪಟ್ಟಣದ ಮನೆಯೊಂದರ ಮುಂದೆ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ಕಳವು ಮಾಡಿದ ಪ್ರಕರಣ ಮಾಸುವ ಮುನ್ನವೇ ಈಗ ಪಟ್ಟಣದ ಹೃದಯ ಭಾಗದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ವರದಿ : ಈರಯ್ಯ ಕುರ್ತಕೋಟಿ