Crime : ಒಂಟಿ ಮನೆ ಟಾರ್ಗೆಟ್ ಮಾಡಿ ಕಳ್ಳತನಕ್ಕೆ ಯತ್ನ ಮಾಡಿದ ಖತರ್ನಾಕ್ ಕಳ್ಳರು..!


 ಒಂಟಿ ಮನೆ ಟಾರ್ಗೆಟ್ ಮಾಡಿ ಕಳ್ಳತನಕ್ಕೆ ಯತ್ನ ಮಾಡಿದ ಖತರ್ನಾಕ್ ಕಳ್ಳರು..!

ದೊಡ್ಡಬಳ್ಳಾಪುರ:  ಒಂಟಿ ಮನೆಯನ್ನು ಟಾರ್ಗೆಟ್ ಮಾಡಿ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿರುವ ಘಟನೆ ತಾಲೂಕಿನ ಕೆಳಗಿನಜೂಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ..

ದಿನನಿತ್ಯ  ಮನೆಯ ಮಾಲೀಕರು ರಾತ್ರಿ ಸಮಯದಲ್ಲಿ ನಾಯಿಗಳಿಗೆ ಊಟ ತರಲು ಕೆಳಗಿನಜೂಗಾನಹಳ್ಳಿಗೆ ಬರುತ್ತಿದ್ದರು. ಇದನ್ನೆ ಬಂಡವಾಳ ಮಾಡಿಕೊಂಡ ಖತರ್ನಾಕ್ ಕಳ್ಳರು ಕಲ್ಲಿನಿಂದ ಬಾಗಿಲನ್ನು ಜಜ್ಜಿ ಕಳ್ಳತನಕ್ಕೆ ಯತ್ನ ಮಾಡಿದ್ದಾರೆ..

ಇದೆ ವೇಳೆ ಮಾತನಾಡಿದ ಮನೆಯ ಮಾಲಿಕ ಮುನಿಯಪ್ಪ, ನಾವು ಸುಮಾರು 35 ವರ್ಷಗಳಿಂದ ಇಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಇತ್ತೀಚೆಗೆ ಬೋರ್ ಹಾಕಿಸಿ ಮನೆ ಕಟ್ಟಿ ಇಲ್ಲೇ ವಾಸ ಮಾಡುತ್ತಿದ್ದೇವೆ. ಯಾವತ್ತೂ ಇಂತಹ ಘಟನೆ ನಡೆದಿರಲಿಲ್ಲ. ತಡರಾತ್ರಿ ಮನೆಯಲ್ಲಿ ನಾವು ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿದ್ದಾರೆ ಎಂದು ತಿಳಿಸಿದ್ದಾರೆ.ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ..

ವರದಿ : ಮಂಜು

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">