ಹುಬ್ಬಳ್ಳಿ : ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸದ ಮುಂದೆ ರವಿವಾರ ನೈರುತ್ಯ ರೈಲ್ವೆ ಕೋರ್ಸ್ ಕಂಪ್ಲೀಟ್ ಆ್ಯಕ್ಟ್ ಅಪ್ರೇಂಟಿಸ್ ವಿದ್ಯಾರ್ಥಿಗಳಿಂದ ಹಾಗೂ ಪಾಲಕರಿಂದ ಪ್ರತಿಭಟನೆ ಕೈಗೊಳ್ಳಲಾಯಿತು
ಅಪ್ರೇಂಟಿಸ್ ವಿದ್ಯಾರ್ಥಿಗಳ ಪರವಾಗಿ ಅವರ ಪಾಲಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನೈರುತ್ಯ ರೈಲ್ವೆ ವಿಭಾಗದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿಯನ್ನು ಒದಗಿಸುವುದರ ಜೊತೆಗೆ ಅವರಿಗೆ ಉದ್ಯೋಗವನ್ನು ಸಹ ಕಲ್ಪಿಸಿ ಅವರ ಜೀವನಕ್ಕೆ ಅನುಕೂಲ ಮಾಡಿಕೊಟ್ಟಿತ್ತು. ಆದರೆ, ಈ ಹಿಂದೆ ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಅಪ್ರೇಂಟಿಸ್ ವಿದ್ಯಾರ್ಥಿಗಳನ್ನು ಬೀದಿ ಪಾಲು ಮಾಡಿತ್ತು.
ಇದನ್ನು ಮನನೊಂದ ವಿದ್ಯಾರ್ಥಿಗಳು ಈಗಾಗಲೇ ಹತ್ತು ಹಲವಾರು ಬಾರಿ ಸಂಸದರನ್ನು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿದ್ದರು ಯಾವುದೇ ಪ್ರಯೋಜವಾಗುತ್ತಿಲ್ಲ. ಅಲ್ಲದೇ ಸ್ಥಳೀಯ ಸಂಸದರಾದ ಪ್ರಹ್ಲಾದ ಜೋಶಿ ಅವರಿಗೆ ಮನವಿ ಕೊಡಲು ಪಾಲಕರಿ ಹಾಗೂ ವಿದ್ಯಾರ್ಥಿಗಳು ಅವರ ನಿವಾಸ ಮುಂದೆ ಬಂದು ನಿಂತರು ಸಂಸದರು ನಮ್ಮಗೆ ಯಾವುದೇ ರೀತಿಯ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.
ಇದರಿಂದ ನೈರುತ್ಯ ರೈಲ್ವೆ ಕೋರ್ಸ್ ಕಂಪ್ಲೀಟ್ ಆ್ಯಕ್ಟ್ ಅಪ್ರೇಂಟಿಸ್ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳ ಜೀವನ ಅನರ್ಥವಾಗಿದೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಷ್ಟು ಬೇಗನೆ ಈ ವಿದ್ಯಾರ್ಥಿಗಳಿಗೆ ಸೂಕ್ತವಾದ ಉದ್ಯೋಗವನ್ನು ಒದಗಿಸಿ ಅವರ ಜೀವನವನ್ನು ರೂಪಿಸಲು ಮುಂದಾಗಬೇಕಿದೆ. ಸಂಸದರ ಈ ನಿರ್ಲಕ್ಷ್ಯಸ ವರ್ತನೆಗೆ ಬರುವ ದಿನಗಳಲ್ಲಿ ತಕ್ಕಪಾಠವನ್ನು ಕಲಿಸಬೇಕಾಗುತ್ತದೆ. ಅಧಿಕಾರ ಕೇವಲ ಕ್ಷಣಿಕ ಎಂಬುವುದನ್ನು ಅವರು ಅರಿಯಬೇಕಾಗಿದೆ ಎಂದು ಹೇಳುತ್ತಾ ಸಂಸದರ ವಿರುದ್ಧ ಧಿಕಾರವನ್ನು ಎಲ್ಲಾ ಪಾಲಕರು ಹಾಗೂ ವಿದ್ಯಾರ್ಥಿಗಳು ಕೂಗಿದರು.
ಈವೇಳೆ ಪಾಲಕರು ಹಾಗೂ ವಿದ್ಯಾರ್ಥಿಗಳು ಸಂಸದರ ಈ ನಿರ್ಲಕ್ಷ್ಯ ವರ್ತನೆಯನ್ನು ನೋಡದೆ, ಅವರ ನಿವಾಸವನ್ನು ಬಿಟ್ಟು ಮುಂದೆ ಸಾಗಿದರು.
ನಂತರ ಮಾಜಿ ಮುಖ್ಯಮಂತ್ರಿ ಹಾಗೂ ವಿ.ಪ ಸದಸ್ಯ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿ ಮನವಿಯನ್ನು ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿ.ಪ ಸದಸ್ಯ ಜಗದೀಶ ಶೆಟ್ಟರ್ ಮಾತನಾಡಿ, ನೈರುತ್ಯ ರೈಲ್ವೆ ಕೋರ್ಸ್ ಕಂಪ್ಲೀಟ್ ಆ್ಯಕ್ಟ್ ಅಪ್ರೇಂಟಿಸ್ ವಿದ್ಯಾರ್ಥಿಗಳಿಗೆ ಆದಷ್ಟು ಬೇಗನೆ ನ್ಯಾಯಬದ್ಧವಾಗಿ ದೊರಬೇಕಾದ ಉದ್ಯೋಗವನ್ನು ಒದಗಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕೋರ್ಸ್ ಕಂಪ್ಲೀಟ್ ಆ್ಯಕ್ಟ್ ಅಪ್ರೇಂಟಿಸ್ ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ವರದಿ : ಬಸವರಾಜ ಕಬಡ್ಡಿ