Kalaburgi Accident : ಕ್ರೂಸರ್ ಗೆ ಡಿಕ್ಕಿ ಹೊಡೆದ ಸಿಮೆಂಟ್ ಟ್ಯಾಂಕರ್ : 6 ಮಂದಿ ಮೃತ್ಯು


 ಕ್ರೂಸರ್ ಗೆ ಡಿಕ್ಕಿ ಹೊಡೆದ ಸಿಮೆಂಟ್ ಟ್ಯಾಂಕರ್ : 6 ಮಂದಿ ಮೃತ್ಯು

*****************************

 ಕಲಬುರಗಿ: ಸಿಮೆಂಟ್ ಟ್ಯಾಂಕರ್ ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಅಪಘಾತದಲ್ಲಿ ಐವರು ಮಹಿಳೆಯರು ಹಾಗೂ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಭೀಕರ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಅಕ್ಕಲಕೋಟ ತಾಲೂಕಿನ ಶಿರವಾಳ ವಾಡಿ ಹತ್ತಿರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನರ ಮೃತಪಟ್ಟಿದ್ದರೆ, 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

 ಅಪಘಾತದಲ್ಲಿ ಲಲಿತಾಬಾಯಿ ಮಹಾದೇವ ಬುಗ್ಗೆ (50), ರೋಹಿಣಿ ಗೋಪಾಲ ಪೂಜಾರಿ (40), ಸುಂದರಾಬಾಯಿ ಭರತಸಿಂಗ್ ರಜಪೂತ (55), ಸಾಹಿನಾಥ್ ಗೋವಿಂದ ಪೂಜಾರಿ (10) ಸಂಗೀತ ಮದನ್ ಗಾನೆ (35) ಛಾಯಾ ಹನುಮಾನ ನವರೆ (46) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ 10 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೊಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಆಳಂದ ತಾಲೂಕಿನ ಅಣ್ಣೂರ ಗ್ರಾಮದ ನಿವಾಸಿಗಳು ಎಂಬುದು ತಿಳಿದುಬಂದಿದೆ.

ಘಟನೆ ಸ್ಥಳದಲ್ಲಿ ಇದ್ದ ಗ್ರಾಮಸ್ಥರು ಅಂಬುಲೆನ್ಸ್‌ಗೆ ಕರೆ ಮಾಡಿ ಸೊಲ್ಲಾಪುರ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಿಷಯ ತಿಳಿಯುತ್ತಲೇ ಅಕ್ಕಲಕೋಟ ಪೊಲೀಸರು ಸೊಲ್ಲಾಪುರ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">