Kampli : ಸಾರ್ವಜನಿಕರೇ ಗಮನಿಸಿ : ಪ್ಲಾಸ್ಟಿಕ್ ಬಳಕೆ ನಿಷೇಧ, ನಿಯಮ ಉಲ್ಲಂಘಿಸಿದ್ರೆ 2 ಸಾವಿರ ರೂ. ದಂಡ


ಸಾರ್ವಜನಿಕರೇ ಗಮನಿಸಿ : ಪ್ಲಾಸ್ಟಿಕ್ ಬಳಕೆ ನಿಷೇಧ, ನಿಯಮ ಉಲ್ಲಂಘಿಸಿದ್ರೆ 2 ಸಾವಿರ ರೂ. ದಂಡ

*********************************

ಬಳ್ಳಾರಿ: ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ಶಿವಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ಲಾಸ್ಟಿಕ್ ಉತ್ಪನ್ನಗಳಾದ ರೀತ್ಯಾ ಪ್ಲಾಸ್ಟಿಕ್, ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್, ಪ್ಲಾಸ್ಟಿಕ್ ಬಂಟಿಂಗ್ಸ್, ಪ್ಲಾಸ್ಟಿಕ್ ಪ್ಲೇಕ್ಸ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಅಂಟಿಕೊಳ್ಳುವ ಫಿಲ್ಮ್‍ಗಳು ಎಲ್ಲಾ ದಪ್ಪದ ಡೈನಿಂಗ್ ಟೇಬಲ್ ಮೇಲೆ ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು ನಿಷೇಧಿಸಲಾಗಿದೆ.

ಪ್ಲಾಸ್ಟಿಕ್ ಸ್ಟಿಕ್‍ಗಳೊಂದಿಗೆ, ಇಯರ್ ಬಡ್ಸ್‍ಗಳು, ಬಲೂನ್‍ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕರ್‍ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕರ್‍ಗಳು, ಪ್ಲಾಸ್ಟಿಕ್ ಐಸ್‍ಕ್ರೀಂ ಸ್ಟಿಕ್‍ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟಿರಿನ್ (ಥರ್ಮೋಕೋಲ್), ಪ್ಲಾಸ್ಟಿಕ್ ಚಾಕುಗಳು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸ್‍ಗಳ ಸುತ್ತ ಸುತ್ತುವ ಅಥವಾ ಪ್ಯಾಕಿಂಗ್ ಫಿಲ್ಮ್‍ಗಳು, ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕ್‍ಗಳು, 100 ಮೈಕ್ರಾನ್‍ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿ.ವಿ.ಸಿ ಬ್ಯಾನರ್‍ಗಳು, ಪ್ಲಾಸ್ಟಿಕ್ ಸ್ಟಿಕರ್‍ಗಳು ಸೇರಿದಂತೆ ವಸ್ತುಗಳ ಬಳಕೆಯನ್ನು ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಬಳಸುವುದು, ಮಾರಾಟ ಮಾಡುವುದು ಹಾಗೂ ತಯಾರಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸದರಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮೊದಲನೇಯ ಬಾರಿ ಉಗ್ರಾಣದಲ್ಲಿ ಸಂಗ್ರಹಣೆ ಮಾಡಿದಲ್ಲಿ ರೂ.5 ಸಾವಿರದಿಂದ ರೂ.20 ಸಾವಿರದವರೆಗೆ ಹಾಗೂ ಪುನರಾವರ್ತನೆಯಾದಲ್ಲಿ ರೂ.30 ಸಾವಿರ, ಪ್ಲಾಸ್ಟಿಕ್ ಮಾರಾಟ ಮಾಡಿದಲ್ಲಿ ರೂ.2 ಸಾವಿರದಿಂದ 10 ಸಾವಿರದವರೆಗೆ ಹಾಗೂ ಪುನರಾವರ್ತನೆಯಾದಲ್ಲಿ ರೂ.20 ಸಾವಿರ ದಂಡ, ಜನಸಂದಣಿಯಾಗುವ ಮಾರ್ಕೆಟ್‍ನಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಿದಲ್ಲಿ ರೂ.200 ರಿಂದ ರೂ.1000 ದವರೆಗೆ ಹಾಗೂ ಪುನರಾವರ್ತನೆಯಾದಲ್ಲಿ ರೂ.2ಸಾವಿರ ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">