ಕುಕನೂರು : ಚಿಕ್ಕೋಡಿಯ ಕಾಮಕುಮಾರ ನಂದಿ ಜೈನ ಮುನಿಗಳ ಹತ್ಯೆ ಖಂಡಿಸಿ ಯಲಬುರ್ಗಾ ಬಿಜೆಪಿ ಮಂಡಲದಿಂದ ಕುಕನೂರು ಪಟ್ಟಣದಲ್ಲಿ ರವಿವಾರ ಸಂಜೆ ಮೌನ ಪ್ರತಿಭಟನೆ ಮಾಡಲಾಯಿತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಿರೇಕೊಡಿಯ ಕಾಮಕುಮಾರ ನಂದಿ ಮಹಾರಾಜ ಜೈನ ಮುನಿಗಳ ಭೀಕರ ಹತ್ಯೆ ಖಂಡಿಸಿ ಬಿಜೆಪಿ ಯಲಬುರ್ಗಾ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಕುಕನೂರು ಪಟ್ಟಣದಲ್ಲಿ ಸಂಜೆ ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಶಿವಕುಮಾರ್ ನಾಗಲಾಪುರ್ ಮಠ ಅವರು, ಅಹಿಂಸಾ ವಾದಿಗಳು, ಸದ್ದರ್ಮ, ಸದಾಚಾರ ಪ್ರತಿಪಾದಕರು ಚಿಕ್ಕೋಡಿ ಜೈನ ಮುನಿಗಳ ಹತ್ಯೆ ಖಂಡನೀಯ ಕೃತ್ಯವಾಗಿದೆ, ಈಗಿನ ಸರ್ಕಾರ ಸಾಧು, ಸಂತರು ಧರ್ಮ ಸಂರಕ್ಷಕರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ. ಇಂತಹ ಕೃತ್ಯೆಗಳು ಸಮಾಜದ ಶಾಂತಿ, ನೆಮ್ಮದಿ ಹಾಳು ಮಾಡುತ್ತವೆ,ಇಂತಹ ಪ್ರಕರಣಗಳು ಮತ್ತೆ ಮಾರುಕಳಿಸದಂತೆ ತಪ್ಪಿತಸ್ತರಿಗೆ ಉಗ್ರಕ್ರಮ ಕೈಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಕುಕನೂರು ನಗರ ಘಟಕದ ಅಧ್ಯಕ್ಷ ಬಸವರಾಜ್ ಹಾಳಕೇರಿ ಮತ್ತು ಪದಾಧಿಕಾರಿಗಳು, ಬಿಜೆಪಿ ಮುಖಂಡ ಅನಿಲ್ ಆಚಾರ್, ಲಕ್ಷ್ಮಣ್ ಕಾಳಿ, ಪಟ್ಟಣ ಪಂಚಾಯತಿಯ ಬಿಜೆಪಿ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಈರಯ್ಯ ಕುರ್ತಕೋಟಿ