ವರದಿಗಾರ ಶರಣಪ್ಪ ಕುಂಬಾರ ನಿಧನ ಗಣ್ಯರ ಸಂತಾಪ ಸೂಚನೆ
ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ 43 ವರ್ಷದ ಕೃಷಿ ಪ್ರಿಯ ಪತ್ರಿಕಾ ಮುಖ್ಯಸ್ಥರಾದ ಹಾಗೂ ವಿವಿಧಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ವರದಿಗಾರನಾಗಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸುತ್ತಿದ್ದ ಶರಣಪ್ಪ ಕುಂಬಾರ್ ಅವರು ಅಟತ್ ಅನಾರೋಗ್ಯದಿಂದ ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು ಅವರು ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ್ ತಂಗಡಿ ಸಂಸದರಾದ ಸಂಗಣ್ಣ ಕರಡಿ ಶಾಸಕರಾದ ದೊಡ್ಡನಗೌಡ ಎಚ್ ಪಾಟೀಲ್ ಕೊಪ್ಪಳ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದರು ಶರಣಪ್ಪ ಕುಂಬಾರರು ಉತ್ತಮ ವರದಿ ಮತ್ತು ಲೇಖನ ಮೂಲಕ ಗಮನ ಸೆಳೆದಿದ್ದರು ಮೃತರಿಗೆ ತಾಯಿ ಪತ್ನಿ ಮತ್ತೆ ಒಬ್ಬ ಮಗನಿದ್ದ ಸಹೋದರರು ಸೇರಿದಂತೆ ಬಂಧು ಮಿತ್ರರನ್ನು ಅಗಲಿದ್ದಾರೆ ಸುದ್ದಿ ತಿಳಿದು ಕುಷ್ಟಗಿ ತಾಲೂಕಿನ ವಿವಿಧ ಪತ್ರಿಕೆ ವರದಿಗಾರರು ಮತ್ತು ಸುದ್ದಿ ವಾಹಿನಿಯ ಪತ್ರಕರ್ತರು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ನೆರವು ನೀಡಿದರು ಮತ್ತು ಅವರ ಮಗನ ವಿದ್ಯಾಭ್ಯಾಸದ ಜಿಲ್ಲಾ ಹಿರಿಯ ವರದಿಗಾರರಾದ ಮಂಜುನಾಥ್ ಗೊಂಡಬಾಳ ಭರವಸೆ ನೀಡಿದರು ಸಂಕಷ್ಟದಲ್ಲಿರುವ ಶರಣಪ್ಪ ಕುಂಬಾರರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಆರ್ಥಿಕ ನೆರವು ಪತ್ನಿಗೆ ಸರ್ಕಾರಿ ಉದ್ಯೋಗ ಪುತ್ರನ ಶಿಕ್ಷಣಕ್ಕೆ ನೆರವು ಒದಗಿಸಬೇಕೆಂದು ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸದಸ್ಯರು ಒತ್ತಾಯಿಸಿದರು ನಂತರ ಒಂದು ನಿಮಿಷಗಳ ಕಾಲ ಮೌನಚರಣೆ ಆಚರಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ