ಮಕ್ಕಳಿಗೆ ಬೀಜದುಂಡೆ ತಯಾರಿಸುವ ಮೂಲಕ ಪರಿಸರ ಜಾಗೃತಿ ಮೂಡಿಸಿದ ಶಿಕ್ಷಕರು
ಲಿಂಗಸೂಗೂರು ತಾಲೂಕಿನ ರಾಂಪೂರ(ಭೂ)ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರದ ಬ್ಯಾಗ್ ರಹಿತ ಶಾಲಾ ದಿನದಂದು ಶಾಲೆಯ ಶಿಕ್ಷಕರು ಮಕ್ಕಳಿಗೆ ಸಸಿ ನೆಡುವ ಪರಿಕಲ್ಪನೆಯೊಂದಿಗೆ ಬೀಜದ ಉಂಡೆ ಮಾಡುವ ಚಟುವಟಿಕೆ ಮಾಡಿಸಿ ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಿದರು.
ಇಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಂಪುರ ಭೂ ದಲ್ಲಿ ಮಕ್ಕಳಿಗೆ ಶನಿವಾರ ಬ್ಯಾಗರಹಿತ ದಿನವಾದ ಕಾರಣ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸಲು ಬೀಜದ ಉಂಡೆ ಮಾಡಿಸಲಾಯಿತು...
ಈ ಒಂದು ಚಟುವಟಿಕಾ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯರಾಗಿ ಪಾಲ್ಗೊಂಡು ಅವರೇ ಸ್ವತಹ ಬೀಜದ ಉಂಡೆಗಳನ್ನು ತಯಾರಿಸಿ ನಷ್ಟವಾದಂತಹ ಭೂಮಿಗಳಲ್ಲಿ , ಅರಣ್ಯ ಪ್ರದೇಶಗಳಲ್ಲಿ , ಹೊಲದ ಬದುಗಳಲ್ಲಿ ಎಸೆದು ಸಸಿ ಆಗುವಂತೆ ಮಾಡಿ ಪರಿಸರ ಪ್ರಜ್ಞೆ ಮಕ್ಕಳಲ್ಲಿ ಜಾಗೃತಿ ಮಾಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಪ್ರಭಾವಿ ಮುಖ್ಯ ಗುರುಗಳಾದ ಶರಣಬಸಪ್ಪ ಮುಂಡರಗಿ ರವರು , ಅದೇ ರೀತಿ ವಿಜಯಲಕ್ಷ್ಮಿ ಪಾಟೀಲ್ ಶಿಕ್ಷಕಿ ಯವರು, ಅದೇ ರೀತಿ ಶರಣಮ್ಮ ಅತಿಥಿ ಶಿಕ್ಷಕರು ಇದ್ದರು. ಪ್ರಾಸ್ತಾವಿಕವಾಗಿ ಶ್ರೀ ನಾಗರಾಜ್ ಮಾಂಡ್ರೆ ಶಿಕ್ಷಕರು ಮಾತನಾಡಿ ಮಕ್ಕಳಿಗೆ ಪರಿಸರದಲ್ಲಿ ಯಾವಾಗಲೂ ಪ್ರೀತಿಯನ್ನು ಹೊಂದಿರಬೇಕು , ಪರಿಸರದೊಂದಿಗೆ ಒಡನಾಟ ಉಳ್ಳವರಾಗಿರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು ಈ ಒಂದು ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಮುದ್ದು ಮಕ್ಕಳು ಭಾಗವಹಿಸಿದ್ದರು