Shidlagattha: ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರಪೂರ್ಣಿಮೆ ಅಂಗವಾಗಿ ವೀಶೇಷ ಪೂಜೆ


 ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆಯನ್ನು ಆರಿಸಲಾಗಿತ್ತು.

ಶಿಡ್ಲಘಟ್ಟ - ವಿಜಯಪುರ ಮಾರ್ಗ ಮಧ್ಯೆ ಮಳ್ಳೂರು ಬಳಿ ಇರುವ ಸಾಯಿನಾಥ ಜ್ಞಾನ ಮಂದಿರದಲ್ಲಿ  ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ,ಸತ್ಯ ನಾರಾಯಣ ಸ್ವಾಮಿ ಪೂಜೆ ಹಮ್ಮಿಕೊಂಡಿದ್ದು  ಬೆಳಗ್ಗಿನಿಂದಲೇ ಭಕ್ತಾದಿಗಳು ಆಗಮಿಸಿದ್ದರು.

ಸಾಯಿನಾಥ ಜ್ಞಾನ ಮಂದಿರದ ಅಧ್ಯಕ್ಷ  ನಾರಾಯಣಸ್ವಾಮಿರವರು ಮಾತನಾಡಿ, ಇಂದು ಗುರುಪೂರ್ಣಿಮೆ ಇದರ ಅಂಗವಾಗಿ ಬೆಳಗಿನಿಂದಲೇ ಭಕ್ತಾದಿಗಳು ಬಂದು ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ ಎರಡು ದಿನಗಳಿಂದ ರುದ್ರ ಹೋಮ ಸತ್ಯನಾರಾಯಣ ಹೋಮ. ಸಾಯಿ ಹೋಮ, ದತ್ತಾತ್ರೇಯ ಹೋಮ, ಸುದರ್ಶನ ಹೋಮ ಹೀಗೆ ಹಲವಾರು ಹೋಮಗಳನ್ನು

ಮುತ್ತೂರು ವೆಂಕಟೇಶ್ ಸ್ವಾಮಿಗಳು ಹೋಮಗಳನ್ನು ಬಹಳ ಅಚ್ಚು ಕಟ್ಟಾಗಿ  ನಡೆಸಿಕೊಟ್ಟರು ಇವೆಲ್ಲವೂ ಲೋಕ ಕಲ್ಯಾಣಕ್ಕಾಗಿ ಮತ್ತು ನಮ್ಮ ಕ್ಷೇತ್ರದ ಜನರಿಗೆ ಒಳ್ಳೆಯದಾಗಲಿ ಎಂದು ಮಾಡಿಸಿರುವುದು ಎಂದು ತಿಳಿಸಿದರು

ಸತೀಶ್ ಶರ್ಮ ಶಾಸ್ತ್ರಿ ಗಳು ಮಾತನಾಡಿ, ಜನರ ಕಷ್ಟಗಳನ್ನು ದೂರ ಮಾಡಲೆಂದು ದೇವಸ್ಥಾನದಲ್ಲಿ ಹಲವಾರು ಹೋಮಗಳನ್ನು ಮಾಡಿದ್ದು  ಸಾವಿರಾರು ಜನ ದೇವರ ದರ್ಶನಕ್ಕೆ ಬಂದು ದರ್ಶನ ಪಡೆದು ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಪುನೀತರಾದರು ಎಂದು ತಿಳಿಸಿದರು .

ಕಾರ್ಯಕ್ರಮಗಳಲ್ಲಿ ಸತೀಶ್ ಶರ್ಮ ಶಾಸ್ತ್ರಿ, ವೆಂಕಟೇಶ್ ಶರ್ಮ ಶಾಸ್ತ್ರಿಗಳು  ಕಂಪನಿ ದೇವರಾಜ್ ,ಅರ್ಚಕರಾದ ದೇವರಾಜ್ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು  ಉಪಸ್ಥಿತರಿದ್ದರು.

ವರದಿ ಲೋಕೇಶ್.ಶಿಡ್ಲಘಟ್ಟ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">