Vanasiri : ಜೀವ ಇಲ್ಲದ ಆಲದ ಮರಕ್ಕೆ ಮರುಜೀವ ನೀಡಿದ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೀಯ


ಜೀವ ಇಲ್ಲದ ಆಲದ ಮರಕ್ಕೆ ಮರುಜೀವ ನೀಡಿದ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೀಯ......ಶ್ರೀ ಮಹಾಂತಸ್ವಾಮೀಜಿ ಕಲ್ಯಾಣಾಶ್ರಮ ಮುದಗಲ್

ಸಿಂಧನೂರು ತಾಲೂಕಿನ ತಿಮ್ಮಾಪೂರ ಗ್ರಾಮದ ಸೂಗೂರೇಶ ಹಿರೇಮಠ ಅವರ ಸುಪುತ್ರನ ನಾಮಕರಣ ಕಾರ್ಯಕ್ರಮದ ಅಂಗವಾಗಿ ಕುಟುಂಬದ ವತಿಯಿಂದ 101ಸಸಿಗಳನ್ನು  ವಿತರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಆಗಮಿಸಿದ ಶ್ರೀ ಮಹಾಂತಸ್ವಾಮೀಜಿ ಕಲ್ಯಾಣಾಶ್ರಮ ಮುದಗಲ್ ಅವರು ಸಸಿಗಳನ್ನು ವಿತರಿಸಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕವನ್ನು ಹಸಿರು ಕ್ರಾಂತಿ ಮಾಡುವಲ್ಲಿ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ಶ್ಲಾಘನೀಯ,ಸಸಿಗಳನ್ನು ಬೆಳಸಿ,ರಕ್ಷಣೆ ಮಾಡುವುದು, ಜೀವ ಇಲ್ಲದ ಆಲದ ಮರಕ್ಕೆ ಮರುಜೀವ ನೀಡುವುದು ಅದಕ್ಕೆ ಪೂಜ್ಯರುಗಳಿಂದ ಅಮರ ಶ್ರೀ ಎಂದು ನಾಮಕರಣ ಮಾಡಿರುವುದು ತುಂಬಾ ಹೆಮ್ಮೆಯ ಸಂಗತಿ.ಇಂತಹ ಪ್ರಕೃತಿ ಮಾತೆಯ ಸೇವಕನಿಗೆ ದೇವರು ಇನ್ನಷ್ಟು ಪ್ರಕೃತಿ ಮಾತೆಯ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.

ನಂತರ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ ಅವರು ಮಾತನಾಡಿ ಕಲ್ಯಾಣ ಕರ್ನಾಟಕದಾದ್ಯಂತ ವನಸಿರಿ ಫೌಂಡೇಶನ್ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಈ ಭಾಗದವನ್ನು ಹಚ್ಚ ಹಸಿರುಗೊಳಿಸಲು ಶ್ರಮಿಸುತ್ತಿದ್ದೇವೆ. ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಟ್ಟು ಪೋಷಣೆ ಮಾಡಿದರೆ ಮನೆಗೊಂದು ಮರ ಊರಿಗೊಂದು ವನ ನಿರ್ಮಾಣವಾಗುತ್ತದೆ ಈ ದೃಷ್ಟಿಯಿಂದ ಇಂದು ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಒಂದೊಂದು ಸಸಿಯನ್ನು ನೀಡಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದೇವೆ ಈ ಒಂದೊಂದು ಸಸಿಯನ್ನು ನೆಟ್ಟು ಕಾಳಜಿ ವಹಿಸಿ ಪೋಷಣೆ ಮಾಡಬೇಕು ಎಂದು ಕರೆ  ನೀಡಿದರು.


ಈ ಸಂದರ್ಭದಲ್ಲಿ ಶ್ರೀ ಮಹಾಂತಸ್ವಾಮೀಜಿ ಕಲ್ಯಾಣಾಶ್ರಮ ಮುದಗಲ್,ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಹಾಗೂ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಅಮರೇಗೌಡ ಮಲ್ಲಾಪೂರ,ಸೂಗೂರೇಶ ಹಿರೇಮಠ,ಶರಣಯ್ಯಸ್ವಾಮಿ ಹಿರೇಮಠ,ವನಸಿರಿ ಫೌಂಡೇಶನ್ ಸದಸ್ಯರು, ಹಿರೇಮಠ ಕುಟುಂಬದ ಬಂಧುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. 

ವರದಿ : ಡಿ ಅಲಂಬಾಷ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">