Kampli : ಡಾ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ಪಟ್ಟಣದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತಿ ಆಚರಣೆ

 

ಕಂಪ್ಲಿ : ಡಾ ಎಪಿಜೆ ಅಬ್ದುಲ್ ಕಲಾಂ ಟ್ರಸ್ಟ್  ವತಿಯಿಂದ ಪಟ್ಟಣದ ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತಿ ಆಚರಿಸಲಾಯಿತು.


ಟ್ರಸ್ಟ್ ನ ಗೌರವ ಅಧ್ಯಕ್ಷರಾದ  ಹುಮೇಶ್ ಸಾಹೇಬ್  ಅವರು ರಾಜ ವೀರ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು  ಬಳಿಕ ಮಾತನಾಡಿದ ಅವರು, ಚಿತ್ರದುರ್ಗದ ಪಾಳೇಗಾರರಾಗಿದ್ದ ಮದಕರಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ನಾಯಕರ ಏಳಿಗೆಗೆ ಒತ್ತು ನೀಡಿದ್ದರು. ಅಂತಹವರನ್ನು ಸ್ಮರಿಸುತ್ತಿರುವುದು ಸಂತಸದ ವಿಚಾರ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿತ್ರದುರ್ಗದ ನಾಯಕರ ಕಲ್ಲಿನ ಕೋಟೆ, ಉಕ್ಕಿನ ದೇಹವನ್ನು ಹೊಂದಿದಂತ ರಾಜಾಧಿ ರಾಜರುಗಳಲ್ಲಿ ಶ್ರೀ ರಾಜಾ ವೀರ ಮದಕರಿ ನಾಯಕರು ಅತ್ಯಂತ ಬಲಿಷ್ಠನು ಹಾಗೂ ಉತ್ತಮ ರಾಜರಾಗಿದ್ದರು,  ಮದಕರಿ ನಾಯಕ ಒಂದು ಸಮಾಜಕ್ಕೆ ಸೀಮಿತವಾದ ರಾಜನಲ್ಲ. ಅವರ ಆಳ್ವಿಕೆ ಅವಧಿಯಲ್ಲಿ ಎಲ್ಲ ಸಮಾಜದ ಹಿತ ಕಾಯುವ ಕೆಲಸ ಮಾಡಿದ್ದಾರೆ.  ಕೆಚ್ಚೆದೆಯ ವೀರರು ಅವರು ಎಂದು ಹೇಳಿದರು.  ಈ ಸಂದರ್ಭದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷರಾದ ಆರ್. ಸುಭಾನ್, ಎ. ಎಸ್.  ಯಲ್ಲಪ್ಪ, ಖಜoಚಿ ಎಚ್. ನಿಸಾರ್, ಸಂಚಾಲಕ ಬಡಿಗೇರ್ ಜಿಲಾನ್ ಸಾಬ್, ಪದಾಧಿಕಾರಿಗಳಾದ ಜಿಲಾನ್, N. ಮೌಲಾಹುಸೇನ್ N. ಅಕ್ಬರ್, H ತೌಫಿಕ್, ಶರಣಯ್ಯ ಸ್ವಾಮಿ, ಉಮಾರ್ ಫಾರುಕ್, ಅಮರನಾಥ ಶಾಸ್ತ್ರಿ, ನವೀನಕುಮಾರ  ಸೇರಿದಂತೆ ಇತರರು ಇದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">