Kushtagi : ಹಳ್ಳಕ್ಕೆ ಬಿದ್ದ ಬಸ್ಸು ಇಪ್ಪತ್ತಕ್ಕೂ ಹೆಚ್ಚು ಜನ ಪ್ರಾಣಪಾಯದಿಂದ ಪಾರು

ಹಳ್ಳಕ್ಕೆ ಬಿದ್ದ ಬಸ್ಸು ಇಪ್ಪತ್ತಕ್ಕೂ ಹೆಚ್ಚು ಜನ ಪ್ರಾಣಪಾಯದಿಂದ ಪಾರು 

 ರವಿವಾರ ಸಂಜೆ 4:30 ಗಂಟೆ  ಸುಮಾರಿಗೆ ಕುಷ್ಟಗಿ ತಾಲೂಕಿನ ದೋಟಿಹಾಳ  ಗ್ರಾಮದಿಂದ ಕಡೆಕೊಪ್ಪ ಅಡವಿಬಾವಿ ಮಾರ್ಗವಾಗಿ ಚಲಿಸುತ್ತಿರುವ ಮಂಗಳೂರು ಬಸ್ಸೊಂದು ಮಿಯಾಪುರು ಮತ್ತು  ಹನಮಸಾಗರ ರಸ್ತೆ   ಮಧ್ಯದಲ್ಲಿ ಬರುವ ಮಿಯಾಪುರ ಗ್ರಾಮದ ಹಳ್ಳಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿರುವುದರಿಂದ ಸುಮಾರು ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದು ಇನ್ನುಳಿದ ಪ್ರಯಾಣಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಬಸ್ಸು ಬಿದ್ದ ಸುದ್ದಿ ಕೇಳಿ ಸ್ಥಳಕ್ಕೆ ಆಗಮಿಸಿದ ಮಿಯಾಪುರ ಗ್ರಾಮದ ಗ್ರಾಮಸ್ಥರು ಗಾಯಾಳುಗಳನ್ನು ಹೊರ ತೆಗೆಯಲು ಅರಸಹಾಸ ಪಟ್ಟಿರುತ್ತಾರೆ ನಂತರ ಹನಮಸಾಗರ  ಮತ್ತು ಕುಷ್ಟಗಿ  ಪೊಲೀಸ್ ಇಲಾಖೆಯ ಗಮನಕ್ಕೆ ತಂದು ತುರ್ತು ವೈದ್ಯಕೀಯ ಸೇವಾ ವಾಹನಗಳಿಗೆ ಕರೆ ಮಾಡಿ ವಿಷಯ ತಿಳಿಸಿ ಮಾನವೀಯತೆ ಮೇರೆದಿದ್ದಾರೆ .

ಘಟನಾ ಸ್ಥಳಕ್ಕೆ ನೋಡಲೆಂದು   ನೂರಾರು ಜನ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿದ್ದರಿಂದ ಕೆಲ ಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು ನಂತರ ಪೊಲೀಸ್ ಇಲಾಖೆಯ ಆಗಮನದಿಂದ ಜನರನ್ನು ನಿಯಂತ್ರಿಸಲು ಸಾಧ್ಯವಾಯಿತು. ಗಾಯಗೊಂಡವರ ಪೈಕಿ ಅಡವಿಭಾವಿ ಗ್ರಾಮದ ಹನುಮಂತ ಹುರುಕೇನ, ಲಲಿತಾ ಹುರುಕೇನ, ಯಲ್ಲಮ್ಮ ಹುರುಕೇನ, ಕಡೆಕೊಪ್ಪ ಗ್ರಾಮದ ಈರಮ್ಮ ಹಿರೇಮಠ, ಮಿಯಾಪುರ್  ಗ್ರಾಮದ ಶರಣಪ್ಪ ನೆಲ್ಲೂರು, ಫಕೀರವ್ವ ಹೊಸಮನಿ, ಬಸವರಾಜ್ ಸುಳಿಭಾವಿ, ನೀಲಮ್ಮ ಅಂಚಿನಾಳ್, ಮೆಣಸಗೆರೆ ಗ್ರಾಮದ ರೇಣುಕಾ, ಇನ್ನಿತರ ಗಾಯಗೊಂಡಿದ್ದು, ಗಾಯಳುಗನ್ನ ಕುಷ್ಟಗಿ ಮತ್ತು ಇಲಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದೆ. ಚಿಕ್ಕಮಗಳೂರು ಘಟಕಕ್ಕೆ ಸೇರಿದ ಬಸ್ ಇದಾಗಿದ್ದು ಮುದ್ದೇಬಿಹಾಳ ಮೂಲದ  ಅಬ್ದುಲ್ ರಜಾಕ್  ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು   ಕುಷ್ಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಚಾಲಕನ ನಿರ್ಲಕ್ಷತನ ಹಾಗೂ ಹಳ್ಳಕ್ಕೆ ಸೇತುವೆ ಇಲ್ಲದೆ ಕಾರಣ ಈ ಘಟನೆ ನಡೆದಿದ್ದು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಮಿಯಾಪುರ ಗ್ರಾಮದ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ತಾಲೂಕ ಆಡಳಿತಕ್ಕೆ ಒತ್ತಾಯಿಸಿದ್ದಾರೆ  

 ಶ್ರವಣ ಅಂಗಡಿ ಸಿದ್ದಿ ಟಿವಿ ಕುಷ್ಟಗಿ


 

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">