ಮಾನ್ವಿ
ವಿಷಯ; ಆಹಾರ ಧಾನ್ಯಕ್ಕೆ ರಾಸಾಯನಿಕ ಮಿಶ್ರಣ ಮಾಡುತ್ತಿದ್ದ ಹಾಗೂ ಎಪಿಎಂಸಿ ನಿಯಮಗಳ ಉಲ್ಲಂಘಿಸಿರುವ ಗುರುರಾಜ್ ಶೆಟ್ಟಿ ಪೋತ್ನಾಳ್ ವ್ಯವಹಾರದ ಲೈಸೆನ್ಸ್ ಅಧಿಕಾರಿಗಳು ರದ್ದುಪಡಿಸಿರುವ ಕುರಿತು.
ಪಡಿತರ ಜೋಳ ಅಕ್ರಮ ಖರೀದಿಸಿ ರಾಸಾಯನಿಕ ಮಿಶ್ರಣ ಮಾಡಿ ಅಕ್ರಮ ಮಾರಾಟದ ದಂಧೆ ಮಾಡುತ್ತಿದ್ದ ಗುರುರಾಜ್ ಶೆಟ್ಟಿ ಪೋತ್ನಾಳ್ ಈತನ ಪವನ್ ಟ್ರೇಡರ್ಸ್ ವ್ಯಾಪಾರ ಲೈಸನ್ಸ್ ನ್ನುಅಧಿಕಾರಿಗಳು ರದ್ದುಪಡಿಸಿದ್ದಾರೆ. ಕರ್ನಾಟಕದಲ್ಲಿ ಸಂಘರ್ಷ ಸಮಿತಿ ಮೇಜರ್ ಶಾನ್ವಾಜ್ ಕಲ್ಯಾಣ ಕರ್ನಾಟಕ ಸಂಘ ಜನಶಕ್ತಿ ಕೇಂದ್ರ ಜಂಟಿಯಾಗಿ ಜನಪರ ಬೇಡಿಕೆ ಇಟ್ಟುಕೊಂಡು ನಿರಂತರ ರಹಿತ ಹೋರಾಟಕ್ಕೆ ಸಂದ ಜಯವಾಗಿದೆ . ಈತನು ಮಾಡಿರುವ ಅಕ್ರಮದೊಂದಿಗೆ ಕುರಿತು ಎಪಿಎಂಸಿ ಅಧಿಕಾರಿಗಳು ತನಿಖೆ ಮಾಡಬೇಕು. ಲಕ್ಷಾಂತರ ಕ್ವಿಂಟಲ್ ಪಡಿತರ ಜೋಳವನ್ನು ಶೇಖರಣೆ ಮಾಡಿ ಸರ್ಕಾರಕ್ಕೆ ಮೋಸ ಮಾಡಿರುವ ಈತನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವ್ಯಾಪಾರದ ಹೆಸರಿನಲ್ಲಿ ಪಡಿತರ ಜೋಳದ ಖರೀದಿ ಮಾಡಿ ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚಿಸುತ್ತಿರುವ ಈತನನ್ನು ಗಡಿಪಾರು ಮಾಡಬೇಕು. ಪಡಿತರ ಜೋಳವನ್ನು ಅಕ್ರಮವಾಗಿ ಮಾರಾಟ ಮಾಡಿರುವ ರೈಚೂರ್ ಜಿಲ್ಲೆಯ ಆಹಾರ ಇಲಾಖೆ ಮ್ಯಾನೇಜರ್ ಗಳನ್ನು ತನಿಖೆಗೆ ಒಳಪಡಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು . ಗುರುರಾಜ್ ಶೆಟ್ಟಿ ಕೇವಲ ರೈಚೂರ್ ಜಿಲ್ಲೆಗೆ ಪಡಿತರ ಜೋಳ ಖರೀದಿ ಮಾಡಿದ್ದಲ್ಲದೆ ಬಳ್ಳಾರಿ ಗುಲ್ಬರ್ಗ ಕೊಪ್ಪಳ ಜಿಲ್ಲೆಯಲ್ಲಿ ಚೇತನಿಗೆ ಆಹಾರ ಪಡಿತರ ಜೋಳ ಮಾರಾಟ ಮಾಡಿದ ಆಹಾರ ಇಲಾಖೆ ಅಧಿಕಾರಿಗಳ ಮೇಲೆ. ಕಾನೂನು ಇಂದ ರಕ್ಷಣೆ ಮಾಡಲು ಈತನಿಗೆ ಭರ್ಜರಿ ದಾಖಲಾತಿಗಳನ್ನು ನೀಡಿದ ಟ್ರೇಡರ್ಸ್ಗಳ ರದ್ದುಗೊಳಿಸಿ ಬೇಕು ಪತ್ರಿಕೆ ಬೂಸ್ಟ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಒತ್ತಾಯಪಡಿಸುತ್ತೇವೆ.
ಈ ಒಂದು ಪತ್ರಿಕಾಗೋಷ್ಠಿಯಲ್ಲಿ ಮೇಜರ್ ಶಾನ್ವಾಜ್ ಕಲ್ಯಾಣ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಸ್ಎಂ ಶಾನ್ವಾಜ್ ,ಕರ್ನಾಟಕ ದಲಿತ ಸಂಘರ್ಷಂತಿಯ ರಾಜ್ಯ ಅಧ್ಯಕ್ಷರಾದ ಹನುಮಂತಪ್ಪ ಸಿಕಲ್, ರಾಜ್ಯ ಮುಖಂಡರಾದ ನರಸಪ್ಪ ಜುಕೂರು . ಜನಶಕ್ತಿ ಕೇಂದ್ರದ ಜಿಲ್ಲಾಧ್ಯಕ್ಷರಾದೀನ್ ತಾಲೂಕ್ ಅಧ್ಯಕ್ಷರಾದ ಎಲಿಯಸ್ ಕನ್ನಡಿಗ ಜಿಲ್ಲಾ ಸಂಚಾಲಕರಾದ ಜಯರಾಜ್ ಕೊಡ್ಲಿ ಜನಶಕ್ತಿ ಮುಖಂಡರಾದ ಶ್ಯಾಮ್ ಸಿಂಗ್ ಇನ್ನು ಮುಂತಾದವರು ಹಾಜರಿದ್ದರು .
ವರದಿಗಾರರು:-ಶಫೀಕ್ ಹುಸೇನ್