ಕಂಪ್ಲಿ - ಗಂಗಾವತಿ
ಕಂಪ್ಲಿ ಮತ್ತು ಗಂಗಾವತಿ ನಡುವೆ ಇರುವ ಸೇತುವೆಯಿಂದ ನಾಗರಹಳ್ಳಿಯ ವರೆಗೂ ಟ್ರಾಫಿಕ್ ಜಾಮ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಒದಗಿ ಬಂದಿದ್ದು, ಟ್ರಾಫಿಕ್ ಕ್ಲೀಯರ್ ಮಾಡಲು ಪೊಲೀಸರು ಹರಸಾಹಸ ಪಟ್ಟರು.
ಯೆಸ್ ವೀಕ್ಷಕರೇ, ಎರಡು ದಿನಗಳಿಂದ ನಡೆಯುತ್ತಿರುವ ಚಿಕ್ಕಜಂತಕಲ್ ಗ್ರಾಮ ದೇವತೆ ಶ್ರೀ ದ್ಯಾವಮ್ಮ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆ ಇಂದು ಸಹಸ್ರಾರು ಸಂಖ್ಯೆಯಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ದೇವಿ ದರ್ಶನಕ್ಕೆ ಬಂದಿದ್ದರು.
ಇನ್ನೂ ವಾಹನಗಳ ನಡುವೆ ನುಕೂನುಗ್ಗಲು ಪ್ರಾರಂಭವಾಗುತ್ತಿದ್ದಂತೆ ಗಂಗಾವತಿ ಪೊಲೀಸ್ ಪಡೆಗಳು ಬಂದು ಟ್ರಾಫಿಕ್ ಕ್ಲೀಯರ್ ಮಾಡಿದರು.
ಟ್ರಾಫಿಕ್ ನಲ್ಲಿ ಸಿಕ್ಕಿಕೊಂಡ ಅಂಬ್ಯೂಲೇನ್ಸ್
ಸುಮಾರು 2ಗಂಟೆಗಳ ಕಾಲ ಟ್ರಾಫಿಕ್ ಆಗಿದ್ದು, ಟ್ರಾಫಿಕ್ ನಲ್ಲಿ ಅಂಬ್ಯೂಲೇನ್ಸ್ ವಾಹನವೊಂದು ವಾಹನಗಳ ಮಧ್ಯೆ ಸಿಕ್ಕಿ, ದಾರಿ ಸಿಗದೇ ಕಂಗಾಲದ ಪರಿಸ್ಥಿತಿಯು ಒದಗಿತ್ತು.
ಪದೇ-ಪದೇ ಟ್ರಾಫಿಕ್
ಚಿಕ್ಕಜಂತಕಲ್ ನ ಕಾಲುವೆಯ ಸೇತುವೆಯು ಚಿಕ್ಕದಾಗಿದ್ದು, ಸೇತುವೆ ಮೇಲೆ ಬೃಹತ್ ವಾಹನ ಸಂಚಾರಕ್ಕೆ ಕಷ್ಟಕರವಾಗಿದೆ, ಶಾಸಕರು ಇತ್ತ ಗಮನಹರಿಸಿ, ರಸ್ತೆ ಆಗಲಿಕರಣ ಮಾಡಬೇಕೆಂಬುದು ಸ್ಥಳಿಯರ ಹಾಗೂ ವಾಹನ ಸವಾರರ ಒತ್ತಾಯವಾಗಿದೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ