Kampli : ಕಾಯಕದ ಮಹತ್ವ ಸಾರಿದ ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ : ತಹಶೀಲ್ದಾ‌ರ್ ಶಿವರಾಜ

ಕಂಪ್ಲಿ :
ಕಾಯಕದ ಮಹತ್ವ ಸಾರಿದ ಕಾಯಕಯೋಗಿ ಶ್ರೀ ಶಿವಯೋಗಿ ಸಿದ್ದರಾಮೇಶ್ವರ  ಎಂದು ತಹಶೀಲ್ದಾ‌ರ್  ಶಿವರಾಜ ಶಿವಪುರ ಹೇಳಿದರು.

ಪಟ್ಟಣದ ತಹಶೀಲ್ದಾರ್ ತಾಲೂಕು ಕಛೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಿಸಿ ಕಾರ್ಯಕ್ರಮದಲ್ಲಿ ತಹಶೀಲ್ದಾರ ಶಿವರಾಜ ಶಿವಪುರ ಮಾತನಾಡಿ ಸಮಾಜದಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಎಲ್ಲರೂ ಸಮಾನರು ಎಂದು ಸಮಾಜಮುಖಿ ತತ್ವಗಳನ್ನು ಸಾರಿದ ವ್ಯಕ್ತಿ  ಶಿವಯೋಗಿ ಸಿದ್ದರಾಮೇಶ್ವರ ಎಂದು ತಿಳಿಸಿದರು.

ನಂತರ ಕಂಪ್ಲಿ ತಾಲೂಕು ಭೋವಿ (ವಡ್ಡರ)ಸಂಘದ ಅಧ್ಯಕ್ಷ ಸಾಮಿಲ್ ವಿ.ಶೇಖಪ್ಪ ಮಾತನಾಡಿ ಜನ-ಜಾನುವಾರುಗಳಿಗೆ, ಪಶು-ಪಕ್ಷಿಗಳಿಗೆ ಕುಡಿಯಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿ ಸಮಾಜ ಮುಖಿಯಾಗಿ ನಡೆದ ಸಿದ್ದರಾಮೇಶ್ವರರ ನಡೆ ಇಂದಿಗೂ ಪ್ರಸ್ತುತವಾಗಿದೆ. ಅಂತರ್ಜಲ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಕೆರೆಗಳನ್ನು ಕಟ್ಟಲು ಸಾಧ್ಯವಾಗದಿದ್ದರೂ, ಹಿಂದಿನವರು ನಿರ್ಮಿಸಿರುವ ಕೆರೆ-ಕಟ್ಟೆಗಳನ್ನು ಹಾಳಾಗದಂತೆ, ಒತ್ತುವರಿಯಾಗದಂತೆ ಸಂಕ್ಷಿಸುವ ಮುಂದಿನ ಪೀಳಿಗೆಗೆ ಉಳಿಸುವ ಹೊಣೆ ನಮ್ಮೆಲ್ಲರದ್ದಾಗಿದೆ. ಜನತೆಯ ಕಷ್ಟಗಳನ್ನು ಹತ್ತಿರದಿಂದ ನೋಡಿ ಅವರ ನೋವುಗಳನ್ನು ನಿವಾರಿಸಲು ಶ್ರಮಿಸುತ್ತಾ, ನುಡಿದಂತೆ ನಡೆದಿದ್ದಾರೆ. ದುಡಿಮೆಯಲ್ಲಿ ಭಗವಂತನನ್ನು ಕಾಣಬೇಕು. ಕಷ್ಟಬಂದಾಗ ಕೊರಗದೇ ಸಹಿಷ್ಟುವಾಗಿ ಬದುಕಬೇಕೆಂದು ಸಂದೇಶ ನೀಡಿ ಸಮನಾತೆಯ ಗಾರುಡಿಗರಾಗಿದ್ದರು.ಒಬ್ಬರನ್ನು ಮೋಸಮಾಡಿ ತೋರಿಕೆಗೆ ಕಾಣುವಂತೆ ಡಾಂಬಿಕತನದಿಂದ ಪೂಜೆ ಮಾಡಿದರೆ ಅರ್ಥವಿಲ್ಲ ಎಂದು ಎಚ್ಚರಿಸಿದ್ದರು. ಅವರ ಸಿದ್ದಾಂತಗಳನ್ನು, ಆದರ್ಶಗಳನ್ನು ಅರ್ಥಮಾಡಿಕೊಂಡು ಬಾಳಿದರೆ ಅವರನ್ನು ಅನುಸರಿಸಿದರೆ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.

ಈಸಂದರ್ಭದಲ್ಲಿ ಪ್ರಥಮ ದರ್ಜೆ ಸಹಾಯಕ ಮಾಲತೇಶ ದೇಶಪಾಂಡೆ ಗ್ರಾಮ ಆಡಳಿತ ಅಧಿಕಾರಿಗಳಾದ ಲಕ್ಷ್ಮಣನಾಯ್ಕ,ಶಿವರುದ್ರಯ್ಯ,ವಿಜಯಕುಮಾರ,ವೆಂಕಟೇಶ,ಜಿಲಾನ್,ಕಂಪ್ಲಿ ತಾಲೂಕು ಭೋವಿ (ವಡ್ಡರ)ಸಂಘದ ಗೌರವಾಧ್ಯಕ್ಷ ಗೋವಿಂದರಾಜು,ಪದಾಧಿಕಾರಿಗಳಾದ ಗುರ್ರಪ್ಪ,ತಿಪ್ಪೇಸ್ವಾಮಿ,ಸತ್ಯಪ್ಪ,ನೀಲಕಂಠ,ವಿ ಹುಲಗಪ್ಪ,ಶರಬಣ್ಣ,ವೆಂಕಟರಮಣ,ವಿ.ಟಿ.ನಾಗರಾಜ,ನಂದಿಬಸುವ,ಸೂರಿ ಸಮಾಜದ ಮುಖಂಡರು ತಾಲೂಕು ಕಚೇರಿಯ ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು.


 

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">