ಕಂಪ್ಲಿ ಪಟ್ಟಣದ ಪಾಠ ಶಾಲೆಯಲ್ಲಿ ಇಂದು ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ""ಮಹಿಳಾ ಸಂಗಮ""ಮಹಿಳೆಯರ ಪ್ರಗತಿಯ ಸಮಾವೇಶ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಪರಮ ಪೂಜ್ಯ ರಾಜಶ್ರೀ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರಿ ಡಾ.ಹೇಮಾವತಿ ವಿ.ಹೆಗ್ಗಡೆ ಕೃಪಾಶೀರ್ವಾದಗಳೊಂದಿಗೆ ಕಂಪ್ಲಿಯಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಗ್ರಾಮೀಣ ಭಾರತದ ಮಹಿಳೆಯರು ಮತ್ತು ಮಕ್ಕಳಿಗೆ ತುರ್ತು ಸಹಾಯದ ಅಗತ್ಯವಿದೆ ಎಂಬುದನ್ನು ಮನಗಂಡ ಡಾ.ಹೆಗ್ಗಡೆಯವರು ಜ್ಞಾನ ವಿಕಾಸ ಮತ್ತು ಸಿರಿಯಂತಹ ವಿಶೇಷ ಸ್ವ-ಸಹಾಯ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಇದಲ್ಲದೆ, ಅಂತಹ ಉದ್ಯಮದ ಮೊದಲು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದುಶ್ರೀಮತಿ. ಹೆಗ್ಗಡೆಯವರು ಸುತ್ತಮುತ್ತಲಿನ ಗ್ರಾಮಗಳ ಸಮರ್ಪಿತ ಮಹಿಳಾ ಸ್ವಯಂಸೇವಕರ ಗುಂಪನ್ನು ಒಟ್ಟುಗೂಡಿಸಿದರು. ಮನೆಗೆಲಸ, ನೈರ್ಮಲ್ಯ (ಅವರ ತಕ್ಷಣದ ಸುತ್ತಮುತ್ತಲಿನ ಒಳಗೆ ಮತ್ತು ಹೊರಗೆ), ಪೋಷಣೆ, ಕರಕುಶಲ, ಗುಡಿ ಕೈಗಾರಿಕೆಗಳು ಮುಂತಾದ ಪ್ರದೇಶಗಳನ್ನು ಒಳಗೊಂಡ ವಿಶೇಷವಾಗಿ ವಿನ್ಯಾಸಗೊಳಿಸಿದ, ತೀವ್ರವಾದ ತರಬೇತಿ ಅವಧಿಗಳ ಮೂಲಕ ಅವರು ಅವರನ್ನು ಬೆಳೆಸುತ್ತಿದ್ದಾರೆ ಇಂತಹ ಸಂಸ್ಥೆ ನಮ್ಮ ಕಂಪ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಮಹಿಳೆಯರಿಗೆ ನೀಡುತ್ತಿರುವ ಸೇವೆಗೆ ನಾನು ಚಿರಋಣಿ ಹಾಗೂ ನೀವು ದುಡಿದಂತ ಹಣದಲ್ಲಿ ಉಳಿತಾಯ ಮಾಡಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟಾಗ ಮಾತ್ರ ನಾವು ನಮ್ಮ ಬಡತನ ನಿರ್ಮೂಲನೆ ಮಾಡಲು ಸಾಧ್ಯ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ನೀಡುವ ಮೂಲಕ ಉದ್ಯೋಗ ನೀಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮಕ್ಕಳಿಗೆ ಬಾಲ್ಯ ವಿವಾಹ ಮಾಡಬೇಡಿ ಎಂದು ಹೇಳಲಾಯಿತು ಹಾಗೂ ಸ್ವಯಂ ಉದ್ಯೋಗದಲ್ಲಿ ನಿರತರಾದ ಮಹಿಳೆಯರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೇಮಯ್ಯ ಸ್ವಾಮಿ, ಶ್ರೀ ಸುಧೀರ್, ಶ್ರೀಮತಿ ನಿರ್ಮಲಾ ವಸಂತ , ಗಣೇಶ್, ಶ್ರೀಮತಿ ಬನಶಂಕರಿ ವೀರೇಂದ್ರ ರೆಡ್ಡಿ, ಶ್ರೀ ಡಾ.ವೆಂಕಟೇಶ್ ಹನುಮಕ್ಕನವರ, ಶ್ರೀಮತಿ ಶ್ವೇತಾoಬರಿ , ಶ್ರೀಮತಿ ಮುಕ್ಕುಂದಿ ಮಮತಾ, ಕನಕಪ್ಪ ಸುಣಗಾರ, ಪಿ.ಎಸ್ ಐ ಲಿಂಗಪ್ಪ, ಪುರಸಭೆ ಸದಸ್ಯರು ಮಾಜಿ ತಾಲೂಕ ಪಂಚಾಯತಿ ಸದಸ್ಯರು ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.