ಕಂಪ್ಲಿ.ಜ.23:ತಾಲೂಕಿನ ಗಂಗಾವತಿ ರಸ್ತೆಯಲ್ಲಿರುವ ಹಜರತ್ ಬಡೇಸಾಹೇಬ್ ಖಾದ್ರಿ ದರ್ಗಾ ಷರೀಫ್ ಶರಣರಾದ ಪರಮಪೂಜ್ಯ ಗುರುಗಳಾದ ಹಜರತ್ ಷಾಹ ಮುಸ್ತಾಫ ಖಾದ್ರಿ ನೂರೇ ರಹಮತುಲ್ಲಾ ಅಲೈ ಅವರ ಮೂರು ದಿನಗಳ ಉರುಸು ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರು ಪೀಠಾಧಿಪತಿಗಳಾದ ಸೈಯ್ಯದ್ ಷಾ ಅಬುಲ್ ಹಸನ್ ಖಾದ್ರಿ ಉರ್ಫ ಆಜಂ ಸಾಹೇಬ್ ಸಜ್ಜಾದೆ ನಶೀನ್ ದಿವಾನಖಾನೆ ಇವರ 236 ನೇ ಉರುಸು-ಎ- ಷರೀಫ ಅಂಗವಾಗಿ ಕಂಪ್ಲಿ ಡಾ.ಎಪಿಜೆ.ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ದರ್ಗಾಕ್ಕೆ ಬರುವ ಭಕ್ತಾಧಿಗಳಿಗೆ ಸಿಹಿ ಪಾನಕ ವಿತರಿಸಲಾಯಿತು. ಡಾ.ಎಪಿಜೆ.ಅಬ್ದುಲ್ ಕಲಾಂ ಟ್ರಸ್ಟ್ ಅಧ್ಯಕ್ಷ ಅಕ್ಕಿ ಜಿಲಾನ್ ಅವರು ಸಿಹಿ ಪಾನಕ ವಿತರಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ದರ್ಗಾಕ್ಕೆ ಬರುವ ಭಕ್ತಾಧಿಗಳಿಗೆ ಸಾರ್ವಜನಿಕರಿಗೆ ಸಿಹಿ ಪಾನಕವನ್ನು ವಿತರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದರ್ಗಾದ ಸೈಯದ ಉಮೇಸ್ ಸಾಹೇಬ್ ಖಾದ್ರಿ ಡಾ.ಎಪಿಜೆ.ಅಬ್ದುಲ್ ಕಲಾಂ ಟ್ರಸ್ಟ್ ಸಂಚಾಲಕ ಬಡೀಗೆರ ಜಿಲಾನ್ ಸಾಬ್,ಪದಾಧಿಕಾರಿಗಳಾದ ಸುಬಾನ್,ಜಿಲಾನ್,ನಿಸಾರ್,ಮೈನು,ತೌಫಿಕ್,ಇಮ್ತಿಯಾಜ್,ರೋಷನ್,ಬಿ.ರಸೂಲ್,ರಾಹುಲ್ ಸೇರಿದಂತೆ ಅನೇಕರಿದ್ದರು.