ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದ ಅಂಗವಾಗಿ ತೂಬಗೆರೆಯ ಎಲ್ಲಾ ರಾಮಭಕ್ತರು ಸೇರಿ ಆಯೋಜಿಸಿದ್ದ ಸೀತಾರಾಮ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.
ತೂಬಗೆರೆಯ ಬಸ್ ನಿಲ್ದಾಣದಲ್ಲಿ ಬೃಹತ್ ರಾಮನ ಕಟೌಟ್ ನಿರ್ಮಿಸಿ ವಿಶೇಷ ಪೂಜೆ ಭಜನೆ ಯೊಂದಿಗೆ ರಾಮನಾಮ ಜಪಿಸಿದರು.
ಮನೆ ಮನೆಗಳಲ್ಲೂ ಸಹ ದೀಪವನ್ನು ಬೆಳಗಿಸುವ ಮೂಲಕ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪರೋಕ್ಷವಾಗಿ ಪಾಲ್ಗೊಂಡರು.
ಭಕ್ತಾದಿಗಳಿಗೆ ಲಡ್ಡು- ಪಾನಕ-ಕೋಸಂಬರಿ -ಮಜ್ಜಿಗೆ ವಿತರಿಸುವುದರ ಮೂಲಕ ಅನ್ನದಾನ ಮಾಡಲಾಯಿತು.