ಕಂಪ್ಲಿ : ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ-Siddi TV

ಕಂಪ್ಲಿಯ ಕಲ್ಮಠದ ಶ್ರೀ ಪ್ರಭು ಮಹಾಸ್ವಾಮಿಗಳ ಅನುದಾನಿತ  ಪ್ರೌಢಶಾಲೆಯಲ್ಲಿ ಜೆ ಸಿ ಐ ಕಂಪ್ಲಿ ಸೋನಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 11:30 ಸುಮಾರಿಗೆ ಜರುಗಿತು.

 ಮುಖಂಡರಾದ ಜಿ.ಜಿ.ಚಂದ್ರಣ್ಣ ಮಾತನಾಡಿ ಜಗತ್ತು ಕಂಡ ಮಹಾನ್ ಸಂತ ಶ್ರೀ ಸ್ವಾಮಿ ವಿವೇಕಾನಂದರು. ಸ್ವಾಮಿ ವಿವೇಕಾನಂದರ ತತ್ವದರ್ಷಗಳು ಸರ್ವರಿಗೂ ಅನುಕರಣೆಯವಾಗಿದ್ದು ಪ್ರತಿಯೊಬ್ಬರೂ ಅವರ ಆದರ್ಶಗಳನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇದೆ ವೇಳೆ ಜೆಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆಯ ಪ್ರಮಾಣ ಪತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ  ವಲಯ 24ರ ಉಪಾಧ್ಯಕ್ಷ  ಸಂತೋಷ್ ಕೊಟ್ರಪ್ಪ ಸೋಗಿ, ಜೆಸಿಐ ಕಂಪ್ಲಿ ಸೋನಾದ ನೂತನ ಅಧ್ಯಕ್ಷ ಸುಹಾಸ್ ಚಿತ್ರಗಾರ್, ಶಾಲಾ ಮುಖ್ಯ ಶಿಕ್ಷಕ ಬಸವರಾಜ್, ಶಿಕ್ಷಕರಾದ ನಜೀರ್, ಗೌರಮ್ಮ, ಲೋಕೇಶ್, ಭೀರಲಿಂಗಪ್ಪ, ರಾಜೇಶ್ವರಿ, ಜೆಸಿಐ ಕಂಪ್ಲಿ ಸೋನಾದ ಕಾರ್ಯದರ್ಶಿ ಭರತ್ ಪದ್ಮಶಾಲಿ, ಪದಾಧಿಕಾರಿಗಳಾದ ಬಿ. ರಸೂಲ್, ಅಮರನಾಥ ಶಾಸ್ತ್ರಿ ಸೇರಿದಂತೆ ಇತರರಿದ್ದರು.

ಕಂಪ್ಲಿ ಮತ್ತು ಸುತ್ತಮುತ್ತಲಿನ ಸುದ್ದಿಗಳನ್ನು ನೋಡಲು ವಾಟ್ಸಪ್ ಗ್ರೂಪ್ Join ಆಗಿ

ಕ್ಲಿಕ್ ಮಾಡಿ : JOIN NOW


Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">