ರಸ್ತೆ ಅಪಘಾತ; ರೈತ ಮುಖಂಡ ನಿಧನ
ಹೊಸಪೇಟೆ ನಗರದ ಹೊರವಲಯದಲ್ಲಿ ನಡೆದ
ರಸ್ತೆ ಅಪಘಾತದಲ್ಲಿ ರಾಜ್ಯ ರೈತ ಸಂಘದ ಪ್ರಧಾನ
ಕಾರ್ಯದರ್ಶಿ ಕಾರ್ತಿಕ್ ಜೀರೆ ನಿಧನರಾಗಿದ್ದಾರೆ.
ತಮ್ಮ ದ್ವಿಚಕ್ರ ವಾಹನದಲ್ಲಿ ಮುನಿರಾಬಾದ್
ಪೊಲೀಸ್ ಠಾಣಾ ವ್ಯಾಪ್ತಿಯ ಬೂದಗುಪ್ಪ ಕ್ರಾಸ್
ಬಳಿ ಸಂಚರಿಸುವಾಗ ಅಪಘಾತ ನಡೆದಿದ್ದು, ತೀವ್ರ
ಗಾಯಗೊಂಡಿದ್ದ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ
ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ
ಜಾವ ನಿಧನರಾಗಿದ್ದಾರೆ.