ಕಂಪ್ಲಿ :
ಕಂಪ್ಲಿ ಪಟ್ಟಣದ ಆರಾಧ್ಯ ದೈವ ಶ್ರೀ ಅಯ್ಯಪ್ಪ ಸ್ವಾಮಿಯ ಸಾವಿರಾರು ಭಕ್ತರ ಹಾಗೂ ಶಿಷ್ಯವೃಂದವರಿಗೆ ಗುರುಗಳಾದ ಪರಮ ಪೂಜ್ಯ ಶ್ರೀ ವಸಂತ ಗುರುಸ್ವಾಮಿಗಳು ಗುರುವಾರ ರಾತ್ರಿ ಅನಾರೋಗ್ಯದಿಂದ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸಾ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಸಂದರ್ಭದಲ್ಲಿ ಶಿಷ್ಯವೃಂದವರು ಮಾತಾನಾಡಿ, ಗುರುಗಳು ಮೂಲತಃ ಉಡುಪಿಯರು ಇವರಿಗೆ ಮಂಗಮ್ಮ ಎಂಬ ಧರ್ಮಪತ್ನಿಯಿದ್ದು, ಇವರು ಕಂಪ್ಲಿ ಪಟ್ಟಣದಲ್ಲಿ ಸರಿ ಸುಮಾರು 38 ವರ್ಷಗಳ ಕಾಲ ಸತತವಾಗಿ ಶಬರಿ ಮಲೈ ಯಾತ್ರೆಯನ್ನು ಮಾಡಿದ್ದು, ಸುತ್ತ ಮುತ್ತನ ಸಾವಿರಾರು ಶಿಷ್ಯರಿಗೆ ಮಾಲೆಧಾರಣೆ ಮಾಡುತ್ತದ್ದಾರು, ಮತ್ತು ಅಯ್ಯಪ್ಪಸ್ವಾಮಿ ಶಾಸ್ತ್ರ ಬದ್ಧವಾದ ಪೂಜೆಯನ್ನು ಹಾಗೂ ಸತತ 38 ವರ್ಷಗಳ ಕಾಲ ಅಯ್ಯಪ್ಪನ ಸೇವೆಯನ್ನು ಮಾಡುತ್ತ, ಶಿಷ್ಯವೃದವರ ಅಪಾರ ಪ್ರೀತಿ ಅಭಿಮಾನವನ್ನು ಗಳಿಸಿದ ಗುರುಗಳು ಆಗಲಿರುವ ಎಲ್ಲ ಶಿಷ್ಯವೃಂದಕ್ಕೆ ತುಂಬಾ ನೋವುಂಟು ಮಾಡಿದೆ ಎಂದರು.
ಅಂತ್ಯಸಂಸ್ಕಾರ ಶುಕ್ರವಾರ ಮಧ್ಯಾಹ್ನದ 2 ಗಂಟೆಗೆ ಕಂಪ್ಲಿ ಕೋಟೆ ಹೊಳೆ ಹತ್ತಿರ ಜರುಗಲಿದ್ದು, ಅಪಾರ ಸಂಖ್ಯೆಯ ಶಿಷ್ಯರು ಈ ಅಂತ್ಯಸಂಸ್ಕಾರಕ್ಕೆ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಗುರುಸ್ವಾಮಿಗಳ ಶಿಷ್ಯವೃದವರು ಸೇರಿದಂತೆ ಹಲವು ಹಳ್ಳಿಗಳ ಅಯ್ಯಪ್ಪ ಸ್ವಾಮಿ ಭಕ್ತರು ಸೇರಿದ್ದರು.