ಸಂವಿಧಾನ ದಿನಾಚರಣೆ 75 ನೇ ಗಣರಾಜ್ಯೋತ್ಸವದ ಸಂಭ್ರಮದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯಿಂದ ಫೆಬ್ರವರಿ 12 ತಾರೀಖಿನಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ 6 ವ್ಯಾಪ್ತಿಯ ವಾರ್ಡ್ ನಾಗಶೆಟ್ಟಿಕೊಪ್ಪ ಬೆಂಗೇರಿ ಗೋಪನಕೊಪ್ಪ ದೇವಾಂಗಪೇಟೆ ಮುಂತಾದ ನಗರಗಳಲ್ಲಿ ಅದ್ಧೂರಿಯಾಗಿ ಸಂವಿಧಾನ ಜಾಗೃತಿ ಜಾಥಾವನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ವಲಯ ಕಛೇರಿ 6 ಆಯುಕ್ತರು ಮತ್ತು ಅನಿಲ ಪರ್ವತ ಸರ್ ಶೇಖರ್ ಲಮಾಣಿ ಪ್ರಶಾಂತ ಸರ್ ಮತ್ತು 40 ನೇ ವಾರ್ಡಿನ ಕಾರ್ಪೊರೇಟರ್ ಶಿವಕುಮಾರ್ ರಾಯನಗೌಡ್ರ ಮತ್ತು 42 ನೇ ವಾರ್ಡಿನ ಕಾರ್ಪೊರೇಟರ್ ಮಹದೇವಪ್ಪ ನರಗುಂದ ಸರ್ ಮತ್ತು ದಲಿತ ಮುಖಂಡರು ಗುರುನಾಥ ಉಳ್ಳಿಕಾಶಿ,ಪ್ರೇಮನಾಥ ಚಿಕ್ಕತುಂಬಳ ಮತ್ತು ಮುಖ್ಯ ಶಿಕ್ಷಕರು ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ವಿವಿಧ ಪ್ರಗತಿಪರ ಮತ್ತು ದಲಿತ ಮುಖಂಡರು ಹಾಗೂ ಪ್ರಶಾಂತ ಮನಮುಟಗಿ,ನಿಂಗರಾಜ ಹೊಸಮನಿ , ಸಿದ್ದಾರ್ಥ ಹೊಸಮನಿ, ದೇವಪ್ಪ ,ಉಮೇಶ್ ,ಮಲ್ಲೇಶ್ ಯುವಕರು ಪಾಲ್ಗೊಂಡಿದ್ದರು ಇನ್ನೂ ಅನೇಕರು ಉಪಸ್ಥಿತರಿದ್ದರು ವಿಶೇಷವಾಗಿ ಮಹಿಳಾ ಡೊಳ್ಳು ಬಡಿತ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆಯಿತು.
ವರದಿ : ಸಿದ್ದಿ ಟಿವಿ, ಹುಬ್ಬಳ್ಳಿ