ಸಂತೋಷ್ ಆನಂದ್ ರಾಮ್ ಅವರಿಂದ ಜುಗಲ್ ಬಂದಿ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆ
ಹೊಸಪೇಟೆಯ ಯುವ ಪ್ರತಿಭೆಗಳಿಂದ ಮೂಡಿ ಬರುತ್ತಿರುವ ಜುಗಲ್ ಬಂದಿ ಸಿನಿಮಾ 2024ರ ಮಾರ್ಚ್ 1ನೇ ತಾರೀಖಿನಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದ್ದು ಈ ಕುರಿತು ಚಿತ್ರತಂಡ ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಅವರಿಂದ ಪೋಸ್ಟರ್ ಬಿಡುಗಡೆಗೊಳಿಸಿ ಸಿನಿಮಾ ಬಿಡುಗಡೆ ಗೊಳ್ಳುತ್ತಿರುವ ದಿನಾಂಕವನ್ನು ಘೋಷಿಸಿದರು.
ಇದೆ ವೇಳೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಜುಗಲ್ ಬಂದಿ ಚಿತ್ರತಂಡವು ಟ್ರೈಲರ್ ಹಾಗೂ ಹಾಡುಗಳನ್ನು ಬಿಡುಗಡೆಗೊಳಿಸಿ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಇದೀಗ ಮಾರ್ಚ್ ಒಂದರಂದು ಸಿನಿಮಾ ಬಿಡುಗಡೆಗಾಗಿ ರಾಜ್ಯದಾದ್ಯಂತ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.
ಹೊಸಪೇಟೆಯ ದಿವಾಕರ್ ಡಿಂಡಿಮ ಅವರ ಕಥೆ, ಬರಹ ಹಾಗೂ ನಿರ್ದೇಶನ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಸಂತೋಷ ಆಶ್ರಯ್ ನಟ, ಕಾಂತಾರ ಖ್ಯಾತಿಯ ಮಾನಸಿ ಸುಧೀರ್, ಸಲಗ ಸಿನಿಮಾ ಖ್ಯಾತಿಯ ಯಶ್ ಶೆಟ್ಟಿ, ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ಅಶ್ವಿನ್, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ಖ್ಯಾತಿಯ ಅರ್ಚನಾ ಕೊಟ್ಟಿಗೆ ಗಿಚ್ಚ ಗಿಲಿಗಿಲಿ ಶೋ ಖ್ಯಾತಿಯ ಚಂದ್ರಪ್ರಭಾ ಸೇರಿದಂತೆ ಹೊಸಪೇಟೆಯ ಸಂತೋಷ್ ಆಶ್ರಯ್ ದಿವಾಕರ್ ಡಿಂಡಿಮ ಅವರು ಕಥೆ, ಚಿತ್ರಕತೆ ರಚಿಸಿ ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.