ಕಂಪ್ಲಿ :
ಕಂಪ್ಲಿ - ಬಳ್ಳಾರಿ ರಸ್ತೆಯಲ್ಲಿರುವ ವಿಜಯನಗರ ಕಾಲುವೆ(ಹಿರೇ ಕಾಲುವೆ)ಯ ಸೇತುವೆ ಬಳಿ ನಿನ್ನೆ ಜೆಸಿಬಿ ಹೊಡೆತಕ್ಕೆ ವಿದ್ಯುತ್ ಕಂಬ(Electric Double Poll) ನೆಲಕ್ಕೆ ಉರುಳಿದ್ದು, KEB ಅಧಿಕಾರಿಗಳು ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ.
ದಿನ ಕಳೆದರೂ ಕ್ಯಾರೇ ಎನ್ನದ ಕಂಪ್ಲಿ ಕೆಇಬಿ ಅಧಿಕಾರಿಗಳು, ವಿದ್ಯುತ್ ಕಂಬ ಬಿದ್ದ ರಸ್ತೆಯಿಂದ ರೈತರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.
ಈಗಾಗಲೇ ಬಿದ್ದ ಕಂಬದ ವಿದ್ಯುತ್ ತಂತಿಗಳ ಕಾಣದೇ ವಯಸ್ಕರ ಅಜ್ಜ ಮತ್ತು ಜನರು ಬಿದ್ದಿದ್ದು ಸಹ ಉಂಟು.
ಇನ್ನು ಈ ಘಟನೆಯನ್ನು ನೋಡಿ ವಾಹನ ಸವಾರರೇ, ರಸ್ತೆಗೆ ಅಡ್ಡಲಾಗಿ ಮುಳ್ಳು, ಕಲ್ಲು ಹಾಕಿ ಮಾನವೀಯತೆ ಮೆರೆದಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ತೊಂದರೆಯಾದರೇ ಆದಕ್ಕೆ ನೇರ ಹೊಣೆ ಕಂಪ್ಲಿಯ ಕೆಇಬಿ ಅಧಿಕಾರಗಳ ನಿರ್ಲಕ್ಷ್ಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರೂ ಎಚ್ಚೆತ್ತು, ಈ ಕೂಡಲೇ ಬಿದ್ದ ವಿದ್ಯುತ್ ಕಂಬವನ್ನು ಸರಿಪಡಿಸುತ್ತರಾ ಎಂದು ಕಾದುನೋಡಬೇಕಿದೆ.
ಸಿದ್ದಿ ಟಿವಿ, ಕಂಪ್ಲಿ