ಕಂಪ್ಲಿ : ನಿನ್ನೆಯಷ್ಟೆ "ಮರೆಯಾದ ಮಂಟಪ" ಎಂಬ ಟೈಟಲ್ ನ ಅಡಿಯಲ್ಲಿ ಪ್ರಸಾರ ಮಾಡಿದ್ದ ಐತಿಹಾಸಿಕ ಗಣಪತಿ ಮಂಟಪದ ವರದಿಗೆ ಇಂದು ಪುರಾತತ್ವ ಇಲಾಖೆಯ ಅಧಿಕಾರಿಗಳಿಂದ ಪ್ರತಿಕ್ರಿಯೆ ದೊರೆತಿದೆ.
ಕಂಪ್ಲಿ ಕೋಟೆಯ ಕೂಗಳತೆಯ ದೂರದಲ್ಲಿರುವ 13ನೇ ಶತಮಾನದ ಗಣಪತಿ ಮಂಟಪದ ದುಸ್ಥಿತಿಯ ಬಗ್ಗೆ ನಿನ್ನೆ ವರದಿ ಮಾಡಿತ್ತು ಸಿದ್ದಿ ಟಿವಿ.
ಸಿದ್ದಿ ಟಿವಿ ವರದಿಗೆ ಸ್ಪಂದಿಸಿದ ಪುರಾತತ್ವ ಇಲಾಖೆ
ಸಿದ್ದಿ ವರದಿಗೆ ಪುರಾತತ್ವ ಇಲಾಖೆ ಕಮಲಪುರದ ಅಧಿಕಾರಿ ಸ್ಪಂದಿಸಿ, ಇನ್ನು ಒಂದು ವಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ಜೀರ್ಣೋದ್ಧಾರ ಮಾಡುವ ಪ್ರಯತ್ನ ನಮ್ಮದು ಎಂದು ಹೇಳಿದ್ದಾರೆ.
ಕಂಪ್ಲಿಯ ಐತಿಹಾಸಿಕ ಸ್ಥಳಗಳು ಕಣ್ಮರೆಯಾಗದೇ, ಜನರ ಕಣ್ತುಂಬಿಕೊಳ್ಳುವಂತೆ ಕಂಗೋಳಿಸಲಿ ಎಂಬುದು ಸಿದ್ದಿ ಟಿವಿ ಆಶಯವಾಗಿದೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ (6360633266)