ಸಂವಿಧಾನ ಜಾಗೃತಿ ಜಾಥಾ' ಪೂರ್ವಭಾವಿ ಸಭೆ
ತುರ್ವಿಹಾಳ : ಸಂವಿಧಾನ ಪೀಠಿಕೆಯ ಆಶಯ ಮತ್ತು ಮೌಲ್ಯಗಳನ್ನು ಸ್ಥಬ್ದ ಚಿತ್ರಗಳ ಮೂಲಕ ಜನರಿಗೆ ತಿಳಿಸುವ ಉದ್ದೇಶದಿಂದ ಫೆ.18 ರಂದು ರವಿವಾರ ಬೆಳಗ್ಗೆ 11 ಗಂಟೆಗೆ 'ಉಮಲೂಟಿ ಗ್ರಾಮದಿಂದ ತುರ್ವಿಹಾಳ ಪಟ್ಟಣಕ್ಕೆ ಸಂವಿಧಾನ ಜಾಗೃತಿ ಜಾಥಾ' ಆಗಮಿಸುವ ಸಂದರ್ಭದಲ್ಲಿ ಜಾಥಾವನ್ನು ಅದ್ಧೂರಿಯಾಗಿ ಸ್ವಾಗತಿಸುವ ಉದ್ದೇಶದಿಂದ ರೂಪು ರೇಶೆಗಳ ಬಗ್ಗೆ ಚರ್ಚಿಸಲು ತುರ್ವಿಹಾಳ ಪಟ್ಟಣ ಪಂಚಾಯತ್ ವತಿಯಿಂದ ಶುಕ್ರವಾರ ಪೂರ್ವಭಾವಿ ಸಭೆ ಮಾಡಲಾಯಿತು.
ನಂತರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೊಮಲಿಂಪ್ಪ ಸಂವಿಧಾನದ ಕುರಿತು ಉಪನ್ಯಾಸ ನೀಡಿ ‘ಲಿಖಿತ ರೂಪದಲ್ಲಿ ಇರುವ ನಮ್ಮ ದೇಶದ ಸಂವಿಧಾನ ಎಲ್ಲ ದೇಶಗಳ ಸಂವಿಧಾನಕ್ಕಿಂತ ದೊಡ್ಡದು. ನಮ್ಮ ಇಡೀ ದೇಶದ ಆಡಳಿತ ವ್ಯವಸ್ಥೆ ನಿಂತಿರುವುದೇ ಸಂವಿಧಾನದ ಆಧಾರದ ಮೇಲೆ. ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಸದಸ್ಯರಾದ ಬಾಪುಗೌಡ ದೇವರಮನಿ ವಹಿಸಿದ್ದರು. ಪಟ್ಟಣ ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕ ಅಂಬ್ರೇಶಪ್ಪ ಮಾತನಾಡಿ ಸಂವಿಧಾನ ಜಾಗೃತಿ ಜಾಥಾ ತುರ್ವಿಹಾಳ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸುವ ಸಂಧರ್ಭದಲ್ಲಿ ಅಗತ್ಯ ಸಹಕಾರ ನೀಡಲು ಎಲ್ಲಾ ಜನಪ್ರತಿನಿಧಿಗಳು. ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳು ಭಾಗವಹಿಸಿ ಜಾಥಾದ ಯಶಸ್ವಿಗೆ ಸಹಕರಿಸಲು ಕೋರಿದರು.
ಅಲ್ಲದೆ ಉಮಲೂಟಿ ಯಿಂದ ಆಗಮಿಸುವ ಸಂವಿಧಾನ ಜಾಥಾಕ್ಕೆ ತುರ್ವಿಹಾಳ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹತ್ತಿರ ಅಂಬೇಡ್ಕರ್ ಪ್ರತಿಮೆಗೆ ಮಲಾರ್ಪಣೆ ಮಾಡಿ
ವಾಹನ ಜಾಥಾದೊಂದಿಗೆ ಸ್ವಾಗತಿಸಲು ನಿರ್ಧರಿ
ಸಲಾಯಿತು. ಹಾಗೂ ಪಟ್ಟಣದ ವಿವಿಧ ಬೀದಿಗಳಲ್ಲಿ
ಸಾರ್ವಜನಿಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಹಾಗೂ ವಿಧ್ಯಾರ್ಥಿಗಳೊಂದಿಗೆ ಮೆರವಣಿಗೆ ಮೂಲಕ
ಸಾಗಿ ಶ್ರಿಶಂಕಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ
ಸಮಾಪ್ತಿ ಗೊಂಡು ಕಾರ್ಯಕ್ರಮ ಮಾಡುವುದೆಂದು ನಿರ್ಧರಿಸಲಾಯಿತು,ಹಾಗೂ ಸಂವಿಧಾನ ವೈಶಿಷ್ಟ್ಯಗಳ ಬಗ್ಗೆ ಪ್ರೌಡ ಮತ್ತು ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳಿಗೆ ನೃತ್ಯ ಪ್ರದರ್ಶನ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಂಧ ಕುಂಭೋತ್ಸವ ನಡೆಸಲು ತೀರ್ಮಾನಿಸಲಾಯಿತು.
ಈ ಸಭೆಯಲ್ಲಿ ಶಾಸಕರ ಸಹೋದರಾದ ಅರ್. ಶಿವನಗೌಡ, ಅಂಗನವಾಡಿ ಮೇಲ್ವಿಚಾರಕಿ ಮೋನಮ್ಮ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ದೇವಿಧಾಸ,ಮರಿಸ್ವಾಮಿ ಪೂಜಾರಿ ದಲಿತ ಮುಖಂಡ, ಶಿವಪುತ್ರಪ್ಪ ಕೆಂಗೇರಿ, ಸೋಮನಾಥ ಮಾಟೂರು, ರಮೇಶ್, ಮಾಹಾಂತೇಶ ಸಜ್ಜನ,ಡಿ.ಶಂಕರಗೌಡ ಯುವಕ ಮಂಡಳಿ ಅಧ್ಯಕ್ಷ ಮಲ್ಲಯ್ಯ ಭಂಗಿ, ಭೀಮದಾಸ ದಾಸರ,ವೇಂಕಟೆಶ ಅಲಾಭಾವಿ, ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ
ಯರು ವಿವಿಧ ಶಾಲಾ ಕಾಲೇಜುಗಳ ಮುಖ್ಯ ಶಿಕ್ಷಕರು ಉಪನ್ಯಾಸಕರು ಪಟ್ಟಣ ಪಂಚಾಯ್ತಿ ಸಿಬ್ಬಂದಿಗಳು ಭಾಗಿಯಾಗಿದ್ದರು.