ಇಂದು ಪ್ರಥಮ ಪಿಯು ಫಲಿತಾಂಶ
ಬೆಂಗಳೂರು :
ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಶನಿವಾರ karresults.nic.in ನಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಪ್ರಕಟಗೊಳ್ಳಲಿದೆ. ಬೆಳಗ್ಗೆ 9ರಿಂದ 11ರ ಮಧ್ಯೆ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಮಂಡಳಿಯ ಮೂಲಗಳು ತಿಳಿಸಿವೆ.
ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಪರೀಕ್ಷೆ ಮೇ 20 ರಿಂದ ಮೇ 31ರ ವರೆಗೆ ನಡೆಯಲಿದ್ದು, ನೋಂದಾಯಿಸಿಕೊಳ್ಳಲು ಏ. 20 ಕೊನೆಯ ದಿನವಾಗಿದೆ.