Big Impact : ಸಿದ್ದಿ ಟಿವಿ ವರದಿಗೆ ಎಚ್ಚೆತ್ತ ಅಧಿಕಾರಿಗಳು
ಕಂಪ್ಲಿಯ SSLC ಎಕ್ಸಾಂ ಸೆಂಟರ್ ಗಳಲ್ಲಿ ನಡೆಯುತ್ತಿದ್ದ ನಕಲುಗಳ ಬಗ್ಗೆ ನಿನ್ನೆಯಷ್ಟೇ ಪ್ರೋಮೋ ವರದಿಯನ್ನು ಪ್ರಸಾರ ಮಾಡಿತ್ತು ಸಿದ್ದಿ ಟಿವಿ, ನಮ್ಮ ವರದಿಗೆ ಎಚ್ಚೆತ್ತು ಇಂದು ಕಂಪ್ಲಿಗೆ ಕ್ಷೇತ್ರ ಶಿಕ್ಷಣಾಧಿಕಾರಿ(BEO) ಹಾಗೂ 6 ಪರೀಕ್ಷಾ ಸೆಂಟರ್ ಗಳ ಮುಖ್ಯ ಅಧೀಕ್ಷಕರು ಎಕ್ಸಾಂ ಸೆಂಟರ್ ಗಳನ್ನು ಭೇಟಿ ನೀಡಿದ್ದಾರೆ, ಭೇಟಿ ನೀಡಿ ಖಡಕ್ ಎಚ್ಚರಿಕೆ ರವಾನಿಸುವ ಮೂಲಕ ನಕಲು ಮಾಡುವವರಿಗೆ ಹಾಗೂ ಭಾಗಿಯಾಗುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಪಾರದರ್ಶಕವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ ಅವರು ತಾಲೂಕಿನ 6 ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಸೂಚಿಸಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ ಕನ್ನಡ, ಸಮಾಜ ವಿಜ್ಞಾನ ವಿಷಯದ ಎರೆಡು ಪರೀಕ್ಷೆಗಳು ಈಗಾಗಲೇ ಜರುಗಿದ್ದು, ಇನ್ನುಳಿದ ನಾಲ್ಕು ವಿಷಯಗಳ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಅಧಿಕಾರಿಗಳು ಹಾಗೂ ಶಿಕ್ಷಕರು ಶ್ರಮಿಸಬೇಕು. ಪರೀಕ್ಷೆಯಲ್ಲಿ ನಕಲು ಕಂಡು ಬಂದರೆ ಸಂಬಂಧಪಟ್ಟಂತಹ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಕ್ಷಕರು, ಸಿಆರ್ಪಿಗಳು ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಗಮನಕ್ಕೆ :
ಕಾಪಿ ಹೊಡೆದು ಫಸ್ಟ್ ಕ್ಲಾಸ್ ಬರುವ ಬದಲು, ನಿಮ್ಮ ಸ್ವಂತ ಬುದ್ದಿಯಿಂದ ಜಸ್ಟ್ ಪಾಸ್ ಆಗಿ, ಇನ್ನೂ ಚೆನ್ನಾಗಿ ಅಭ್ಯಾಸ ಮಾಡುವುದರ ಮೂಲಕ ಹೆಚ್ಚಿನ ಅಂಕ ಪಡೆಯಬಹುದು ಗಮನದಲ್ಲಿಟ್ಟುಕೊಳ್ಳಿ.
ವೀಕ್ಷಕರೇ, ಏನೇ ಆಗಲಿ, ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರಷ್ಟೇ ಪಾಲಕರ ಪಾತ್ರವೂ ಕೂಡಾ ಅತಿ ಮುಖ್ಯ.
SSLC ಟರ್ನಿಂಗ್ ಪಾಯಿಂಟ್ ಅಂತ ಹೇಳ್ತಾರೇ, ನಿಮ್ಮ ಜೀವನ, ಭವಿಷ್ಯ ರೂಪಿಸಿಕೊಳ್ಳುವ ಮೊದಲ ಹಂತ ಈ ಹತ್ತನೇ ತರಗತಿ ಪರೀಕ್ಷೆ, ಮಕ್ಕಳಿಗೆ ನಕಲುನ ಸುಳಿವು ನೀಡಬೇಡಿ ಎಂಬುದು ಸಿದ್ದಿ ಟಿವಿಯ ಆಶಯ.
ಇನ್ನಾದರೂ ಸಂಭಂದಿಸಿದವರು ಎಚ್ಚೆತ್ತು ಪರೀಕ್ಷೆಯನ್ನು ಸುಸೂತ್ರವಾಗಿ ನಡೆಯಲು ದಾರಿ ಮಾಡಿಕೊಡುತ್ತಾರಾ ಎಂದು ಕಾದುನೋಡಬೇಕಿದೆ.
ಇದು ಸಿದ್ದಿ ಟಿವಿಯ ಬಿಗ್ ಇಂಪ್ಯಾಕ್ಟ್
ಬ್ಯೂರೋ ರಿಪೋರ್ಟ್, ರಘುವೀರ್, ಸಿದ್ದಿ ಟಿವಿ, ಕಂಪ್ಲಿ (News& Ads : 6360633266 )