ಇಂದು ಜನಾರ್ಧನ್ ರೆಡ್ಡಿ ಬಿಜೆಪಿ ಸೇರ್ಪಡೆ, ಕೊಪ್ಪಳ, ಬಳ್ಳಾರಿ ಗೆಲುವು ಮತ್ತಷ್ಟು ಸಲೀಸು?
ಮಾಜಿ ಸಚಿವ, ಶಾಸಕ, ಕೆ ಆರ್ ಪಿ ಪಿ ಸಂಸ್ಥಾಪಕ ಗಾಲಿ ಜನಾರ್ಧನ್ ರೆಡ್ಡಿ ಇಂದು ಸೋಮವಾರ ಮತ್ತೆ ಮರಳಿ ಬಿಜೆಪಿ ಪಕ್ಷ ಸೇರಲಿದ್ದಾರೆ. ಇಂದು ಬೆಂಗಳೂರಿನ ಜನಾರ್ಧನ್ ರೆಡ್ಡಿ ನಿವಾಸದಲ್ಲಿ ನಡೆದ ಕೆ ಆರ್ ಪಿ ಪಿ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಬಿಜೆಪಿ ಜೊತೆ KRPP ಪಕ್ಷ ವಿಲೀನಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆ ಜನಾರ್ಧನ್ ರೆಡ್ಡಿ ಅವರು ಇಂದು ಸೋಮವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ 10 ಗಂಟೆಗೆ ಅಧಿಕೃತವಾಗಿ ಬಿಜೆಪಿ ಪಕ್ಷ ಸೇರಲಿದ್ದಾರೆ.
ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷ ಸೇರ್ಪಡೆ ಸುದ್ದಿ ಕಳೆದೆರಡು ತಿಂಗಳಿಂದ ಕೇಳಿ ಬರುತ್ತಿತ್ತು. ಒಂದು ವಾರದ ಹಿಂದೆ ಕೇಂದ್ರ ಗೃಹ ಮಂತ್ರಿ, ಅಮಿತ್ ಶಾಹ ಅವರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆ ಕುರಿತು ರೆಡ್ಡಿ ಮಾತುಕತೆ ನಡೆಸಿದ್ದರು.
ರೆಡ್ಡಿ ಅವರ ಇಂದಿನ ಸಭೆಯಲ್ಲಿ ಬಿಜೆಪಿ ಸೇರುವ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು ಜನಾರ್ಧನ್ ರೆಡ್ಡಿ ಮತ್ತೆ ಬಿಜೆಪಿ ಸೇರುತ್ತಿದ್ದಾರೆ.
ಜನಾರ್ಧನ್ ರೆಡ್ಡಿ ಪಕ್ಷ ಸೇರ್ಪಡೆಯಿಂದ ಬಳ್ಳಾರಿ, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಮತ್ತಷ್ಟು ಸಲೀಸು ಎಂದು ವ್ಯಾಖ್ಯಾನಿಸಲಾಗುತ್ತಿದೆ.
ನ್ಯೂಸ್ ಬ್ಯುರೋ, ಸಿದ್ದಿ ಟಿವಿ,