ಕಂಪ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಸುಸೂತ್ರ..!
ಕಂಪ್ಲಿ :
ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ಪರೀಕ್ಷೆಗಳು ಸೋಮವಾರ ಆರಂಭವಾಗಿದ್ದು, ತಾಲ್ಲೂಕಿನ 6 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆ ಸಿಸಿ ವೆಬ್ ಕ್ಯಾಮೆರದ ಹದ್ದಿನ ಕಣ್ಣಿನಲ್ಲಿ ಪರೀಕ್ಷೆ ಸುಸೂತ್ರವಾಗಿ ಜರುಗಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದ್ದು, ತಾಲ್ಲೂಕಿನ ಪರೀಕ್ಷೆಗೆ ನೋಂದಾಯಿಸಿದ ಹಾಜರಾಗಿದ್ದಾರೆ.
ತಾಲ್ಲೂಕಿನ ಕಂಪ್ಲಿ ಪಟ್ಟಣದಲ್ಲಿ ನಾಲ್ಕು, ರಾಮಸಾಗರ ಮತ್ತು ಎಮ್ಮಿಗನೂರು ಗ್ರಾಮಗಳಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರವನ್ನು ರೂಪಿಸಲಾಗಿತ್ತು. ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 248 ವಿದ್ಯಾರ್ಥಿಗಳಲ್ಲಿ 246 ವಿದ್ಯಾರ್ಥಿಗಳು ಹಾಜರಾಗಿದ್ದು ಗಿದ್ದು 02 02 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ "ಕೇಂದ್ರದ ಮುಖ್ಯಸ್ಥರಾದ ಎ.ಎಂ.ಬಸವರಾಜ ತಿಳಿಸಿದರು. ಪಟ್ಟಣದ ಷಾಮಿಯಾಚಂದ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 284 ವಿದ್ಯಾರ್ಥಿಗಳ ಪೈಕಿ 281 ವಿದ್ಯಾರ್ಥಿಗಳು ಹಾಜರಾಗಿದ್ದು, 03 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಸುಜಾತ ತಿಳಿಸಿದರು. ಬಾಲಕಿಯರ ಪದವಿ ಪೂರ್ವ ಮಹಾವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 321 ವಿದ್ಯಾರ್ಥಿಗಳಲ್ಲಿ 319 ವಿದ್ಯಾರ್ಥಿಗಳು0ಹಾಜರಾಗಿದ್ದು, 02 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಉಪಪ್ರಾಚಾರ್ಯ ಬಸವರಾಜ್ ಪಾಟೀಲ್ ತಿಳಿಸಿದರು. ಓದ್ದೋ ಜಡೆಮ್ಮ ಗುರುಸಿದ್ದಯ್ಯನವರ ಖಾಸಗಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 353 ವಿದ್ಯಾರ್ಥಿಗಳಲ್ಲಿ 352 ವಿದ್ಯಾರ್ಥಿಗಳು ಹಾಜರಾಗಿದ್ದು, 01 ವಿದ್ಯಾರ್ಥಿ ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಶಕುಂತಲಾ ತಿಳಿಸಿದರು.
ವಿಜಯನಗರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ324 ವಿದ್ಯಾರ್ಥಿಗಳಲ್ಲಿ 320 ವಿದ್ಯಾರ್ಥಿಗಳು ಹಾಜರಾಗಿದ್ದು, 04 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಆರುಣಾ ತಿಳಿಸಿದರು.
ಎಮ್ಮಿಗನೂರು ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ನೋಂದಾಯಿತ 257 ವಿದ್ಯಾರ್ಥಿಗಳಲ್ಲಿ 255 ವಿದ್ಯಾರ್ಥಿಗಳು ಹಾಜರಾಗಿದ್ದು, 02 ವಿದ್ಯಾರ್ಥಿಗಳು ಗೈರಾಗಿದ್ದಾರೆಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥರಾದ ಗಾಯತ್ರಿದೇವಿ ತಿಳಿಸಿದರು.
ಎಲ್ಲಾ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಆರೋಗ್ಯ ತಪಾಸಣೆ ಮಾಡಿದರು.
ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಕಂಪ್ಲಿ ಪೊಲೀಸ್ ಠಾಣೆಯ ಪಿಐ ಪ್ರಕಾಶ ಮಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಲ್ಲಾ ಕೇಂದ್ರಗಳಲ್ಲೂ ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದರು. ಪರೀಕ್ಷಾ ಕೇಂದ್ರಗಳಿಗೆ ತಹಶೀಲ್ದಾರ ಶಿವರಾಜ ಶಿವಪುರ ಮತ್ತು ತಾ.ಪಂ.ಇಒ ಆರ್.ಕೆ.ಶ್ರೀಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕು ಪರೀಕ್ಷಾ ನೋಡಲ್ ಅಧಿಕಾರಿ ದೈಹಿಕ ಪರಿವೀಕ್ಷಕರಾಗಿ ರಫಿ ಮಹ್ಮದ್ ಖವಾಸ್ ಮಾರ್ಗಾಧಿಕಾರಿಯಾಗಿ ವಿರೇಶ ಕಾರ್ಯನಿರ್ವಹಿಸಿದರು.
(ನಿರೀಕ್ಷಿಸಿ...)
ಕಂಪ್ಲಿ ಖಾಸಗಿ ಶಾಲಾ ಶಿಕ್ಷಕರಿಂದ SSLC ಪರೀಕ್ಷೆಯಲ್ಲಿ ನಕಲಿಗೆ ನಾಂದಿ
ಕಂಪ್ಲೀಟ್ ರಿಪೋರ್ಟ್ ಸಿದ್ದಿ ಟಿವಿಯಲ್ಲಿ