SSLC -ಪರೀಕ್ಷೆಯಲ್ಲಿ ನಕಲುಗಳಿಗೆ ಅವಕಾಶ ನೀಡದಂತೆ ಪಾರದರ್ಶಕ ಪರೀಕ್ಷೆ ನಡೆಸಲು ಪೂರ್ವ ಸಿದ್ದತೆ

ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಕಲಬುರ್ಗಿರವರು ನಾಳೆ ದಿನಾಂಕ 29.03.2024 ರಂದು ಸಾಯಂಕಾಲ 6 ಗಂಟೆಗೆ ಬಳ್ಳಾರಿಗೆ ಆಗಮಿಸಲಿದ್ದು ರಾತ್ರಿ ವಾಸ್ತ್ಯವ ಮಾಡಿ ದಿನಾಂಕ:30.20.2024 ರಂದು ಬೆಳಿಗ್ಗೆ ನಡೆಯಲಿರುವ ವಿಜ್ಞಾನ ವಿಷಯದ ಪರೀಕ್ಷೆಯನ್ನು ಬಳ್ಳಾರಿ ಜಿಲ್ಲೆಯ ಹಲವು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡುವುದರ ಮೂಲಕ ಪರಿಶೀಲಿಸಲಿದ್ದಾರೆ ಕಾರಣ ಎಲ್ಲಾ ತಾಲೂಕುಗಳ ಬಿಇಓ ಹಾಗೂ ತಾಲೂಕ ನೋಡಲಾಧಿಕಾರಿಗಳು ಮತ್ತು ಎಲ್ಲಾ ಪರೀಕ್ಷೆ ಕೇಂದ್ರಗಳ ಮುಖ್ಯ ಅಧೀಕ್ಷಕರು ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯ ಗಳು ಹಾಗೂ ಎಲ್ಲಾ ಪೂರ್ವ ಸಿದ್ಧತೆಗಳನ್ನು ಸಮರ್ಪಕವಾಗಿ ಮಾಡಿಕೊಳ್ಳುವುದು ಹಾಗೂ CCTV LiVE webcasting  ಗೆ ಅಗತ್ಯವಿರುವ internet ಮತ್ತು ಇನ್ನಿತರ ವ್ಯವಸ್ಥೆಗಳನ್ನು ಸಮರ್ಪಕವಾಗಿ ಇಟ್ಟುಕೊಳ್ಳಲು ಈ ಮೂಲಕ ಸೂಚಿಸುತ್ತಾ ಪರೀಕ್ಷೆ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಪರೀಕ್ಷೆಯಲ್ಲಿ ನಕಲುಗಳಿಗೆ ಅವಕಾಶ ನೀಡದಂತೆ ಪಾರದರ್ಶಕ ಪರೀಕ್ಷೆ ನಡೆಸಲು ಪೂರ್ವ ಸಿದ್ದತೆ ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">