ಕಂಪ್ಲಿ :
ಜಾತ್ರೆಯಲ್ಲಿ ಎತ್ತಿನ ಕಾಲು ತುಳಿತಕ್ಕೆ ಜನ ಅಲ್ಲೋಲ ಕಲ್ಲೋಲ
ಜಾತ್ರೆಯ ಗದ್ದಲಕ್ಕೆ ಗಾಬರಿಯಾದ ಎತ್ತುಗಳು
ಬೆಳಗೋಡು ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ದಲ್ಲಿ ನಡೆದ ಘಟನೆ
ಜಾತ್ರೆಯಲ್ಲಿ ಪಟಾಕಿ ಸದ್ದಿಗೆ ಬೆದರಿದ ಎತ್ತುಗಳು
ಎತ್ತುಗಳ ಕಾಲು ತುಳಿತಕ್ಕೆ ಸುಮಾರು 10 ಜನಕ್ಕೆ ಗಾಯ
ಗಾಯಗೊಂಡ ಜನರಿಗೆ ಕಂಪ್ಲಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಒಬ್ಬ ಯುವತಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಪಕ್ಕದ ಗಂಗಾವತಿಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಘಟನಾ ಸ್ಥಳಕ್ಕೆ ಕಂಪ್ಲಿ ಪೊಲೀಸರು ಭೇಟಿ ನೀಡಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ