Breaking : ಚುನಾವಣೆ ಬಹಿಷ್ಕಾರ - ತಮಟೆ ಬೈಲು ಗ್ರಾಮಸ್ಥರು


ಚುನಾವಣೆ ಬಹಿಷ್ಕಾರ - ತಮಟೆ ಬೈಲು ಗ್ರಾಮಸ್ಥರು.

ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ಜಿ ಹೊಸಳ್ಳಿ ತಮಟೆಬೈಲು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನಿವೇಶನಗಳನ್ನು ರೂಪಿಸಿಕೊಂಡು ವಾಸ ಮಾಡುತ್ತಿರುವ 60 ಬುಡಕಟ್ಟು ಕುಟುಂಬಗಳನ್ನು ಇಲ್ಲಿನ ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳದೆ ನಿವೇಶನ ವಂಚಿತರನ್ನಾಗಿಸಿರುವುದು ಬಹಳ ಖಂಡನೀಯ..

ನೊಂದು ಆಕ್ರೋಶಗೊಂಡ 60 ಬುಡಕಟ್ಟು ಕುಟುಂಬಗಳು ಇಂದು ಚುನಾವಣೆ ಬಹಿಷ್ಕಾರ ಘೋಷಿಸಿದ್ದಾರೆ..

ಪ್ರತಿ ವರ್ಷವೂ ಚುನಾವಣೆ ನಡೆಯುವಾಗ ಮಾತ್ರ ರಾಜಕಾರಣಿಗಳು ಓಟು ಕೇಳಲು ಬರುತ್ತಾರೆ ಆದರೆ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ ಭಾರತೀಯ ಸಂವಿಧಾನದ ಅಡಿಯಲ್ಲಿ ನಾವು ಸ್ವತಂತ್ರರಾಗಿ ಬದುಕಲು ಮೂಲಭೂತ ಸೌಕರ್ಯಗಳನ್ನು ಹೊಂದಿಕೊಳ್ಳಲು ಅವಕಾಶವಿದ್ದರೂ ಕೂಡ ಭಾರತೀಯ ಪ್ರಜೆಗಳಾದ ನಮಗೆ ಇದುವರೆಗೂ ಯಾವುದೇ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ.. ಕಂದಾಯ ಇಲಾಖೆ ಅರಣ್ಯ ಇಲಾಖೆಗಳಿಗೆ ಅನೇಕ ವರ್ಷಗಳಿಂದ ಮನವಿಗಳನ್ನು ನೀಡುತ್ತಾ ಬಂದರೂ ಕೂಡ ನಮಗೆ ನ್ಯಾಯ ದೊರೆತಿಲ್ಲ.. ಅಧಿಕಾರಿಗಳ ಬಳಿ ಸೂರಿಗಾಗಿ ಕಚೇರಿಗಳ ಮುಂದೆ ಅಲೆದು ಅಲೆದು ನಮ್ಮ ಚಪ್ಪಲಿ ಸವೆದಿದೆಯೇ ಹೊರತು ಇದುವರೆಗೂ ನಮಗೆ ಒಂದು ಸೂರನ್ನು ಕಲ್ಪಿಸಿ ಕೊಟ್ಟಿಲ್ಲ...

ಸ್ಥಳೀಯ ಶಾಸಕರೇ, ಕಂದಾಯ ಇಲಾಖೆಯವರೇ, ಅರಣ್ಯ ಇಲಾಖೆಯವರೇ... ನಾವು ಪದೇ ಪದೇ ಷೆಡ್ ಗಳನ್ನು ರೂಪಿಸಿಕೊಂಡಾಗಲೂ ಕೂಡ ಅರಣ್ಯ ಇಲಾಖೆಯವರು ಮೂಗು ತೂರಿಸಿ ನಮ್ಮ ಶೆಡ್ ಗಳನ್ನು ನಾಶಪಡಿಸುತ್ತಿರುವುದು ನಮ್ಮ ಜೀವನದ ಜೊತೆಗೆ ಆಡುತ್ತಿರುವ ಚೆಲ್ಲಾಟವಾಗಿದೆ.. ನಾವು ಮನುಷ್ಯರು ಸ್ವಾಮಿ, ನಾವು ಭಾರತೀಯ ಪ್ರಜೆಗಳು ನಮ್ಮನ್ನು ಬದುಕಲು ಬಿಡಿ..ಎಂದು ತಮಟೆ ಬೈಲು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">