ರಾಕ್ ಸ್ಟಾರ್ ನಾಗೇಂದ್ರನಮಟ್ಟಿಯ ಕೊಬ್ಬರಿ ಹೋರಿಗೆ ಕಣ್ಣೀರಿಟ್ಟ ಅಭಿಮಾನಿ ಬಳಗ
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಎತ್ತಿನಹಳಿ ಗ್ರಾಮದಲ್ಲಿ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕ್ಷಣದಲ್ಲಿ ಕೋಲ್ ಮಿಂಚು ಹೊಡೆಯುವ ತರ ಓಟದಲ್ಲಿ ಹೆಸರಾದ ನಾಗೇಂದ್ರ ನಮ್ಮಟೀಯಲ್ಲಿ ರಾಕ ಸ್ಟಾರ್ 105 ಹೆಸರಿನ ಕೊಬ್ಬರಿ ಹೋರಿ ಶನಿವಾರ ಮೃತಪಟ್ಟಿದ್ದು ರವಿವಾರ ಸಾವಿರಾರು ಅಭಿಮಾನಿಗಳಿಂದ ನಗರದಲ್ಲಿ ಹೋರಿಯ ಪಾರ್ಥಿವ ಶರೀರ ಮೆರವಣಿಗೆ ಕಣ್ಣೀರಿನ ಮೂಲಕ ವಿದಾಯ ಹೇಳಿದರು.
ಅದರ ಅಂಗವಾಗಿ ಎತ್ತಿನಹಳ್ಳಿ ಗ್ರಾಮದಲ್ಲಿ ರಾಕ ಸ್ಟಾರ್ ಅಭಿಮಾನಿ ಬಳಗದಿಂದ ಶೋಕ ವ್ಯಕ್ತಪಡಿಸಿ ಮೌನಚರಣೆಯಿಂದ ಹೋರಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜು ಕೋಟಿಗಿ, ಸಿದ್ದರಾಮಗೌಡ ಕೆ ಗೌಡ್ರೆ, ಈಶ್ವರಗೌಡ.ಕೆ. ಗೌಡ್ರು, ಶಿವಪುತ್ರ ನೆಗಳೂರ್, ಪ್ರಜ್ವಲ್ ಕುಂದಗೋಳ, ಸಂತೋಷ ಬೆಟ್ಟದೂರು, ಇನ್ನೂ ಅನೇಕ ಅಭಿಮಾನಿ ಬಳಗದವರು ಭಾಗಿಯಾಗಿದ್ದರು.
ವರದಿ: ವೀರೇಶ್ ಗುಗರಿ