ತೂಬಗೆರೆ: ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ ಬಿಜೆಪಿ - JDS


ತೂಬಗೆರೆ: ಲೋಕಸಭಾ ಚುನಾವಣಾ ಪ್ರಚಾರ ಆರಂಭಿಸಿದ ಬಿಜೆಪಿ - JDS

ದೊಡ್ಡಬಳ್ಳಾಪುರ (ತೂಬಗೆರೆ)  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ - ಜೆಡಿಎಸ್  ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ತೂಬಗೆರೆ  ಹೋಬಳಿಯ ಎರಡು ಪಕ್ಷದ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿ ಚುನಾವಣಾ ಪ್ರಚಾರ ಆರಂಭಿಸಿದರು.

ಮನೆ-ಮನೆಗೆ ಕೇಂದ್ರ ಸರ್ಕಾರದ ಸಾಧನೆಗಳ ಕುರಿತ ಕರಪತ್ರ  ವಿತರಿಸುವ ಕಾರ್ಯಕ್ಕೆ ಇಂದು ಮೆಳೆಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಧುಮಠ ಗ್ರಾಮದಲ್ಲಿ ಕರಪತ್ರಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭಿಸಿ ಇನ್ನೆರಡು ದಿನಗಳಲ್ಲಿ ಹೋಬಳಿಯಾದ್ಯಂತ ಮನೆಮನೆಗೂ ಕರಪತ್ರ ತಲುಪಿಸುವ ಉದ್ದೇಶದೊಂದಿಗೆ ಅಧಿಕೃತ ಪ್ರಚಾರಕ್ಕೆ ಚಾಲನೆ ದೊರೆಯಿತು.

ಜೆಡಿಎಸ್ ಪಕ್ಷದ ಚಿಕ್ಕಬಳ್ಳಾಪುರ ಲೋಕಸಭಾ  ಚುನಾವಣಾ ಉಸ್ತುವಾರಿ  ಅಪ್ಪಯ್ಯಣ್ಣ ಕರಪತ್ರ ವಿತರಿಸಿ ಮಾತನಾಡಿ, ತೂಬಗೆರೆ ಹೋಬಳಿಯಾದ್ಯಂತ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಸಮನ್ವಯ ಸಾಧಿಸಲು ಈಗಾಗಲೇ ಹಲವಾರು ಬಾರಿ ಸಭೆ ನಡೆಸಿ ಯಶಸ್ವಿಯಾಗಿದ್ದೇವೆ. ಇಂದಿನಿಂದ ಎರಡು ಪಕ್ಷಗಳು ಕಾರ್ಯಕರ್ತರು ಜಂಟಿ ಪ್ರಚಾರ ಮಾಡಿ ಮೈತ್ರಿ ಅಭ್ಯರ್ಥಿ ಡಾ. ಕೆ ಸುಧಾಕರ್ ಅವರಿಗೆ ಹೆಚ್ಚಿನ ಲೀಡ್ ಕೊಟ್ಟು  ಗೆಲ್ಲಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.

ಬಿಜೆಪಿ ಮುಖಂಡ ಓಬದೇನಹಳ್ಳಿ ಮುನಿಯಪ್ಪ ಮಾತನಾಡಿ ಬಿಜೆಪಿ ಪಕ್ಷ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರ ಹಿಡಿದು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕು ಚುನಾವಣೆ ಕೇವಲ ಬೆರಳೆಣಿಕೆ ದಿನಗಳಷ್ಟು ಮಾತ್ರ ಬಾಕಿ ಇದೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆಮನೆವು ತಲುಪಿಸಿ ಅಭಿವೃದ್ಧಿಯ ಮೇಲೆ ಮತವನ್ನು ಕೇಳಿ ಎಂದು ಕರೆಕೊಟ್ಟರು.

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯಣ್ಣ, ಕುರುವಿಗೆರೆ ನರಸಿಂಹಯ್ಯ ದೇವನಹಳ್ಳಿ  ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ದೇವರಾಜ್. ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಹೋಬಳಿ ಬಿಜೆಪಿ ಅಧ್ಯಕ್ಷ ವಾಸುದೇವ್ ಬಿಜೆಪಿ ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜ್ ಜೆಡಿಎಸ್ ಮುಖಂಡರಾದ ಗೌರೀಶ್, ಉದ್ಯಮಿ ಸಂದೀಪ್, ಉದಯ ಆರಾಧ್ಯ ವಿವಿಧ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಸುರೇಶ್ ಬಾಬು, ಮುದ್ದುಕೃಷ್ಣಪ್ಪ, ಬಚ್ಚಹಳ್ಳಿ ನಾಗರಾಜ್, ದುರ್ಗೇನಹಳ್ಳಿ ನಾಗರಾಜ್, ತೂಬಗೆರೆ ಮುನಿಕೃಷ್ಣಪ್ಪ ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮುಖಂಡರುಗಳು, ಭಾಗವಹಿಸಿದ್ದರು.

ವರದಿ : ಶಿವಕುಮಾರ್, ಸಿದ್ದಿ ಟಿವಿ, ದೊಡ್ಡಬಳ್ಳಾಪುರ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">