ಶಿವಕುಮಾರ ಮಹಾಸ್ವಾಮಿಗಳವರ 117 ಜಯಂತಿ
ಕಂಪ್ಲಿ :
ಕಂಪ್ಲಿ ತಾಲೂಕಿನ ಎಮ್ಮಿಗನೂರು ಸಮೀಪದ ಎಚ್ ವೀರಾಪುರ ಗ್ರಾಮದ ಶ್ರೀ ಜ್ಞಾನಜ್ಯೋತಿ ಜಡೇಶ ಶಿವಲಿಂಗ ಮಂದಿರದಲ್ಲಿ ಕರ್ನಾಟಕ ರತ್ನ ಡಾ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 117 ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಡೇಶ ತಾತನವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಅಕ್ಷರ ಅನ್ನ ಆಶ್ರಯದ ಮೂಲಕ ನಾಡಿನ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಆಸರೆಯಾದ ಮಹಾನ್ ಚೇತನ ಅವರ ಆದರ್ಶಗಳನ್ನ ಪ್ರಸ್ತುತ ಯುವಕರು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಶಿಕ್ಷಕ ಎಸ್ ರಾಮಪ್ಪ ಮಾತನಾಡಿ ಪ್ರಸ್ತುತ ಕೇಂದ್ರ ಸರ್ಕಾರ ಶ್ರೀಗಳ ಸೇವೆಯನ್ನು ಪರಿಗಣಿಸಿ ಮರಣ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳ ದನಿ ಗೋಡೆ ವಿರೇಶಪ್ಪ, ದೈಹಿಕ ಶಿಕ್ಷಕ ಶಿವಕುಮಾರ್, ಪ್ರಮುಖರಾದ ರಾಜಸಾಬ್, ಬಸವರಾಜ ಆಚಾರಿ ಬಡಗಿ ವೀರೇಶ್, ಹಂಚಿನಾಳ್ ಪೀರಸಾಬ್, ಬಸರಾಜ್ ಬಾನಟ್ಟಿ ಶಿವರಾಮಪ್ಪ , ಸೇರಿದಂತೆ ಶ್ರೀಮಠದ ಸದ್ಭಕ್ತರು ಹಾಗೂ ಮಕ್ಕಳು ಉಪಸ್ಥಿತರಿದ್ದರು.