ದ್ವಿತೀಯ ಪಿಯುಸಿ ಯಲ್ಲಿ ಎಚ್.ಕೀರ್ತಿ 573 ಅಂಕ
ಕಂಪ್ಲಿ :
ಪಟ್ಟಣದ ನಿವಾಸಿಗಳಾದ ಹೊನ್ನಳ್ಳಿ ಸುರೇಶ್ ಹಾಗೂ ಹೊನ್ನಳ್ಳಿ ನಾಗರತ್ನ ದಂಪತಿಗಳ ಮಗಳಾದ ಹೊನ್ನಳ್ಳಿ ಕೀರ್ತಿ ಗಂಗಾವತಿಯ ವಿದ್ಯಾನಿಕೇತನ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ನಡೆಸಿದ್ದು, ಪರೀಕ್ಷೆಯಲ್ಲಿ 600ಕ್ಕೆ 573 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಪಿಯುಸಿ ಉತ್ತಮ ಸಾಧನೆ ಮಾಡಿದ್ದಾರೆ. ಯುವತಿಯ ಈ ಸಾಧನೆಗೆ ಗಣ್ಯರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.