DHS ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಇಲ್ಲಿದೆ ನೋಡಿ
ಕಂಪ್ಲಿ ತಾಲೂಕಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣದ ಹೆಗ್ಗಳಿಕೆಗೆ ಪಾತ್ರವಾಗಿರುವ ಡಿ.ಹೆಚ್.ಎಸ್ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಹೆಚ್ಚಿನ ಫಲಿತಾಂಶ ದೊರೆತಿದೆ.
ಕಲಾ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಒಟ್ಟು 44 ವಿದ್ಯಾರ್ಥಿಗಳು ಉತ್ತೀರ್ಣರಾಗಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಉಪ್ಪಾರ್ ಸಂಗೀತ 548/600 (91%),
ಕಲಾ ವಿಭಾಗದಲ್ಲಿ ಸಿಂಧು ಎ. 531/600 (88.50%)
P.ಜಹೀರ್ ಖಾನ್ 517/600 (86.16%)
ಇನ್ನು ಪ್ರಥಮ ದರ್ಜೆಯಲ್ಲಿ ಒಟ್ಟು 19 ವಿಧ್ಯಾರ್ಥಿಗಳು ಪಾಸ್ ಆಗಿದ್ದು, ಕಾಲೇಜಿಗೆ ಉತ್ತಮ ಫಲಿತಾಂಶ ತಂದ ವಿದ್ಯಾರ್ಥಿಗಳಿಗೆ ಅಧ್ಯಕ್ಷರಾದ ರವೀಂದ್ರ ಗೌಡ ಇಟಗಿ, ಆಡಳಿತಾಧಿಕಾರಿ ಡಾ.ಸಂದೀಪ್ ಕುಮಾರ್ ಮಠದ್ ಹಾಗೂ ಪ್ರಾಂಶುಪಾಲರಾದ ಕುಮಾರಿ ಕಾಳಿ ಗಗನ ಮತ್ತು ಸಿಬ್ಬಂದಿ ವರ್ಗದವರು ಶುಭ ಕೋರಿ, ಅಭಿನಂದನೆ ತಿಳಿಸಿದ್ದಾರೆ.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ
Tags
ಟಾಪ್ ನ್ಯೂಸ್