Kampli : SN ಪೇಟೆ ಶಾಲೆಯಲ್ಲಿ ಮತದಾನ ಜಾಗೃತಿಗಾಗಿ ಪೋಸ್ಟರ್ ಮೇಕಿಂಗ್ ಸ್ಪರ್ಧೆ


ಕಂಪ್ಲಿ : 

ಪಟ್ಟಣದ  ಸತ್ಯನಾರಾಯಣಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲೋಕಸಭೆ ಚುನಾವಣೆ ನಿಮಿತ್ಯ ಮತದಾನ ಜಾಗೃತಿಗಾಗಿ ಭಾನುವಾರ ಪೋಸ್ಟರ್ ಮೇಕಿಂಗ್ ಸ್ಪರ್ಧೆ ನಡೆಯಿತು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಆ‌ರ್. ಕೆ.ಶ್ರೀಕುಮಾ‌ರ್ ಸ್ಪರ್ಧೆಗೆ ಚಾಲನೆ ನೀಡಿ, ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕಿದೆ. ಮತದಾನ ಕೇವಲ ಹಕ್ಕಲ್ಲ ಅದು ಮೂಲಭೂತ ಕರ್ತವ್ಯವೂ ಆಗಿದೆ. ತಪ್ಪದೆ ಮತದಾನ ಮಾಡುವಂತೆ, ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳು, ಯುವಕರು, ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಲು ಪೋಸ್ಟ‌ರ್ ಮೇಕಿಂಗ್ ಸ್ಪರ್ಧೆ ಆಯೋಜಿಸಲಾಗಿದೆ ಎಂದರು. ಪೋಸ್ಟರ್ ಮೇಕಿಂಗ್ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದ 22ಜನರಲ್ಲಿ 20 ಜನ ಪಾಲ್ಗೊಂಡಿದ್ದರು. 18 ವರ್ಷದೊಳಗಿನವರ ಸ್ಪರ್ಧೆಯಲ್ಲಿ ಎಚ್.ಎಂ.ಅಮೂಲ್ಯ (ಪ್ರಥಮ), ತನುಶ್ರೀ (ದ್ವಿತೀಯ), ಬಿ.ವಿ.ಪ್ರಣತಿ(ತೃತೀಯ), 18 ವರ್ಷ ಮೇಲ್ಪಟ್ಟವರ ಸ್ಪರ್ಧೆಯಲ್ಲಿ ಲಿಖಿತಪ್ರಿಯಾ (ಪ್ರಥಮ), ಶ್ರೀದೇವಿ (ದ್ವಿತೀಯ), ರಮೇಶ (ತೃತೀಯ) ಇವರನ್ನು ಜಿಲ್ಲಾ ಮಟ್ಟದ ಪೋಸ್ಟರ್ ಮೇಕಿಂಗ್ ಸ್ಪರ್ಧೆಗೆ ಆಯ್ಕೆ ಮಾಡಲಾಯಿತು. ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕಿ ಪುಷ್ಪಲತಾ, ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕಿ ಸಿ.ಶೋಭಾ ತೀರ್ಪುಗಾರರಾಗಿದ್ದರು. ತಾಲೂಕು‌ ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ಕೆ.ಎಸ್. ಮಲ್ಲನಗೌಡ, ಇಸಿಒ ಟಿ.ಎಂ.ಬಸವರಾಜ, ತಾಪಂ ಎಡಿಪಿಆರ್ ಅಪರಂಜಿ, ಐಇಸಿ ಸಂಯೋಜಕ ಹನುಮೇಶ, ಜಯಶ್ರೀ, ಮುಖ್ಯಶಿಕ್ಷಕ ಹನುಮನಗೌಡ ಇತರರಿದ್ದರು.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">