ಹಿರಿಯ ಪತ್ರಕರ್ತ ನಿಧನ : ಕಂಪ್ಲಿ ಕನಿಪ ಧ್ವನಿ ವತಿಯಿಂದ ಶ್ರದ್ಧಾಂಜಲಿ
ಕಂಪ್ಲಿಯ ಹಿರಿಯ ಪತ್ರಕರ್ತ, ಸಾಕ್ಷಿ ತೆಲುಗು ಪತ್ರಿಕೆ
ವರದಿಗಾರ ಸೈಯ್ಯದ್ ಜಾನಿ(74)ಅನಾರೋಗ್ಯದಿಂದ
ಬುಧವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಂಪ್ಲಿಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಲ್ಲಿ ಹಿರಿಯ ಪತ್ರಕರ್ತ ಸೈಯ್ಯದ್ ಜಾನಿರವರಿಗೆ ಶೃದ್ದಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕನಿಪ ಧ್ವನಿ ಸಂಘಟನೆಯ ಕಂಪ್ಲಿ ತಾಲೂಕ ಅಧ್ಯಕ್ಷ ರವಿ ಮಣ್ಣುರು, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಬೋವೆರ, ತಾಲೂಕ ಉಪಾಧ್ಯಕ್ಷ ಇಂದ್ರಜಿತ್ ಸಿಂಗ್, ದುರ್ಗೇಶ್, ಚನ್ನಕೇಶವ ಮತ್ತು ಸದಸ್ಯರು ಭಾಗಿಯಾಗಿದ್ದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ