Kampli : ಈದ್ಗಾ ಮೈದಾನದಲ್ಲಿ ಪವಿತ್ರ ರಂಜಾನ್ ಆಚರಣೆ : ಶಾಸಕ ಗಣೇಶ್ ಭಾಗಿ


ಕಂಪ್ಲಿ : ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪಾರ್ಥನೆ ಸಲ್ಲಿಸುವ ಮೂಲಕ ಪವಿತ್ರ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಗುರುವಾರ ಆಚರಿಸಿದರು.

ಬೆಳಗ್ಗೆ ಕುಟುಂಬದ ಸದಸ್ಯರೆಲ್ಲರು ಹೊಸ ಉಡುಪುಗಳನ್ನು ಧರಿಸಿ,ಮಹಿಳೆಯರು ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರೇ,ಪುರುಷರು ಈದ್ಗಾ ಮೈದಾನದಲ್ಲಿ ಸುಮಾರು ಒಂದು ಗಂಟೆ ಹೆಚ್ಚು ಕಾಲ ಶ್ರದ್ಧಾ ಭಕ್ತಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇಲ್ಲಿನ ಹೊಸಪೇಟೆ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು.ಕಳೆದ ಒಂದು ತಿಂಗಳಿಂದ ಆಚರಿಸಿಕೊಂಡು ಬಂದಿರುವ ಉಪವಾಸ ವ್ರತ (ರೋಜಾ) ಈ ರಂಜಾನ್ ಹಬ್ಬದೊಂದಿಗೆ ಮುಕ್ತಾಯವಾಗುತ್ತದೆ ಇಂತಹ ಪವಿತ್ರ ರಂಜಾನ್ ಹಬ್ಬದ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ದೇವರ ಕುರಿತು ಏಕಾಗ್ರತೆ ಮೂಡಲು ಸಾಧ್ಯ ಎಂಬುದು ಮುಸ್ಲಿಂ ಬಾಂಧವರ ನಂಬಿಕೆಯಾಗಿದೆ .ದಿನನಿತ್ಯ ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಈ ಪವಿತ್ರ ಧಾರ್ಮಿಕ ರಂಜಾನ್ ಹಬ್ಬದಲ್ಲಿ ರೋಜಾ,ನಮಾಜ್, ಜಾಕಾತ್ ಮಾಡುವುದರಿಂದ  ಹಬ್ಬ ಸ್ವಲ್ಪ ಮಟ್ಟಿಗೆ ಮಾನಸಿಕ ನೆಮ್ಮದಿ ನೀಡುತ್ತದೆಯಲ್ಲದೆ ,ಈ ತಿಂಗಳಲ್ಲಿ ಉಪವಾಸ ವ್ರತ (ರೋಜಾ)ಮಾಡುವುದರಿಂದ ವ್ಯಕ್ತಿಯು ದುಶ್ಚಟಗಳಿಂದ ದೂರವಿರಲು ಸಾಧ್ಯ ಎಂದು ಮುಸ್ಲಿಂ ಸಮಾಜದ ಮೌಲ್ವಿಗಳಾದ ಹಾಜಿ ಜಿಯಾವುದ್ದೀನ್ ಹಾಗೂ ಸಿರಾಜುದ್ದೀನ್ ಹೇಳಿದರು.

ಇಲ್ಲಿನ ಈದ್ಗಾ ಮೈದಾನದ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡ ನಂತರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಮಾತನಾಡಿ ,ರಂಜಾನ್ ತಿಂಗಳಲ್ಲಿ ಮುಸ್ಲಿಮರ ಪವಿತ್ರ ಧರ್ಮಗ್ರಂಥ ಕುರಾನ್ ಪಠಣ ಮಾಡುವುದರಿಂದ ಮನಸ್ಸಿನಲ್ಲಿ ಕಲ್ಮಶಗಳನ್ನು ದೂರವಾಗುತ್ತದೆ ಅಲ್ಲಾಹನನ್ನು ಮನದಲ್ಲಿ ನೆನೆದು ಸಮಾಜದಲ್ಲಿ ಶಾಂತಿ ,ನೆಮ್ಮದಿಯಿಂದ ನಾವೆಲ್ಲರು ಒಂದೇ ಎನ್ನುವ ತತ್ವದ ಅಡಿಯಲ್ಲಿ ಜೀವನ ಸಾಗಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ದುಡಿದುದರಲ್ಲಿ ದಾನ,ಧರ್ಮ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ದೊರೆಯಲಿದೆ ಎಂದರು.ಪ್ರಾರ್ಥನೆ ಮುಗಿದ ನಂತರ ಶುಭಾಷಯಗಳ ವಿನಿಮಯ ಹಂಚಿಕೊಂಡರು ಈ ಕಾರ್ಯಕ್ರಮದಲ್ಲಿ ಸಮಸ್ತ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.ಈದ್ಗಾ ಮೈದಾನದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಸಿ.ಪಿ.ಐ ಪ್ರಕಾಶ ಮಾಳಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.


ರಘುವೀರ್, ಸಿದ್ದಿ ಟಿವಿ, ಕಂಪ್ಲಿ

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">