ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಕಂಪ್ಲಿ :
ಕಂಪ್ಲಿ ತಾಲೂಕಿನ ಸಮೀಪದ ಹೊಸ ದರೋಜಿ ಹಳೆ ದರೋಜಿ ಮದ್ಯದ ಸೈದಾನಮ್ಮ ದರ್ಗಾದ ಬಳಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಸ್ಥಳದಲ್ಲೇ ಮೃತ ಪಟ್ಟ ಘಟನೆ ಶುಕ್ರವಾರ ಜರುಗಿದೆ.
ದೇವಲಾಪುರ ಗ್ರಾಮದ ದುರುಗಪ್ಪ (30) ಮೃತ ವ್ಯಕ್ತಿ. ದರೋಜಿ ಕಡೆಯಿಂದ ದೇವಲಾಪುರಕ್ಕೆ ತೆರಳುವ ವೇಳೆ ಸೈದಾನಮ್ಮ ದರ್ಗಾದ ಬಳಿಯ ತಿರುವವಿನಲ್ಲಿ ವೇಗವಾಗಿ ಸಂಚಾರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ತಲೆ ಗೆ ಪೆಟ್ಟಾಗಿ ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಈ ಕುರಿತು ಸ್ಥಳಕ್ಕೆ ಕುಡುತಿನಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.