ಶ್ರೀ ಉದ್ಭವ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಶ್ರೀ ರಾಮನವಮಿ ಪ್ರಯುಕ್ತ ವಾಸವಿ ಯುವಜನ ಸಂಘದ ವತಿಯಿಂದ ಸಾರ್ವಜನಿಕರಿಗೆ ಪಾನೀಯ (ಪಾನಕ) ಮತ್ತು ಕೋಸಂಬ್ರಿ ವಿತರಿಸುವ ಮೂಲಕ ಕಾಸುಮನೆ ವೀರಾಂಜನೇಯ ರವರು ಚಾಲನೆ ನೀಡಿದರು.
ನಿನ್ನೆ ದೇಶದೆಲ್ಲೆಡೆ ಶ್ರೀರಾಮನ ಉತ್ಸವವನ್ನು ಆಚರಿಸಲಾಗಿತ್ತು, ಆದರಂತೆ ಕಂಪ್ಲಿಯ ಶ್ರೀ ವಾಸವಿ ಯುವಜನ ಸಂಘದಿಂದ ನಗರದ ಉದ್ಭವ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ಪಾನೀಯ, ಕೊಸಂಬ್ರಿ ವಿತರಣೆ ಮಾಡುವ ಮೂಲಕ ರಾಮನ ಕೃಪೆಗೆ ಪಾತ್ರರಾದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಗುರುಕೃಷ್ಣ , ನಿ.ಪೂ.ಅಧ್ಯಕ್ಷ. ಕೆ.ಸುಬ್ರಮಣ್ಯಂ, ರಾಜೇಂದ್ರ,ಮಂಹಾತೇಶ್, ನಾಗೇಶ್, ಹರಿಶಂಕರ್, ಸುರೇಶ್, ಬಳ್ಳಾರಿ ಪ್ರಶಾಂತ, ಸತ್ಯನಾರಾಯಣ ಮತ್ತು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.