Kampli : ತುಕಾರಾಂ ಪರ ಶಾಸಕ ಜೆ ಎನ್ ಗಣೇಶ್ ಅದ್ದೂರಿ ಪ್ರಚಾರ


ತುಕಾರಾಂ ಪರ ಶಾಸಕ ಜೆ ಎನ್ ಗಣೇಶ್  ಅದ್ದೂರಿ ಪ್ರಚಾರ

 ಕಂಪ್ಲಿ : 

ಬಳ್ಳಾರಿ ಮತ್ತು ವಿಜಯ ನಗರ ಜಿಲ್ಲೆಯ ಲೋಕಸಭಾ  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ   ಈ. ತುಕಾರಾಂ ರವರ ಪರವಾಗಿ ಕಂಪ್ಲಿ ಶಾಸಕ ಜೆ.ಎನ್ ಗಣೇಶ್ ಭರ್ಜರಿ ಪ್ರಚಾರ ಕೈಗೊಂಡರು.

  ಬೆಳಗೋಡ ಹಾಳ್, ಅರಲಳ್ಳಿ ತಾಂಡ,  ಸಣಾಪುರ, ಇಟಗಿ, ನಂ2 ಮುದ್ದಾಪುರ, ಆರ್ ಕೊಂಡಯ್ಯ ಕ್ಯಾಂಪ್, ಶಂಕರ್ ಸಿಂಗ್ ಕ್ಯಾಂಪ್ ಹಳೆ ನೆಲ್ಲುಡಿ, ಹೊಸ ನೆಲ್ಲುಡಿ,  ಕೋಟಾಲ್ ಗ್ರಾಮಗಳಲ್ಲಿ ತಮ್ಮ ಸಾವಿರಾರು  ಕಾರ್ಯಕರ್ತರ ಜೊತೆಗೂಡಿ ಪ್ರಚಾರ  ಮಾಡಿದ್ದು ಕಂಡು ಬಂತು.

ಈ ಸಂದರ್ಭದಲ್ಲಿ ಶಾಸಕ ಜೆ ಎನ್ ಗಣೇಶ್ ರವರು ಮಾತನಾಡಿ ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಶಾಶ್ವತ ಗ್ಯಾರಂಟಿ,  ಅದೇ ರೀತಿ ತುಕಾರಾಂ ಅಣ್ಣ ನವರು ಗೆಲ್ಲುವುದು ಗ್ಯಾರಂಟಿ ಎಂದರು .

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಕಂಪ್ಲಿ ತಾಲೂಕಿನ ಹಲವು ಗ್ರಾಮೀಣ ಪ್ರದೇಶದ ಜನರಲ್ಲಿ ಸಂವಿಧಾನದ ಜಾಗ್ರತೆ ಹಾಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಸರ್ಕಾರದ ಸೌಲಭ್ಯಗಳ ಬಗ್ಗೆ ಕಾಳಜಿವಹಿಸಿ, ನಿಮ್ಮ ಅಮೂಲ್ಯ ಮತವನ್ನು ಕಾಂಗ್ರೆಸ್ ಪಕ್ಷದ ನೀಡಿ,  ತುಕಾರಾಂ ಅಣ್ಣನವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿ ಎಂದು ಮತ ಯಾಚನೆ ಮಾಡಿದರು.


ಈ ಸಂದರ್ಭದಲ್ಲಿ  ಶ್ರೀನಿವಾಸಲು (ವಾಸಪ್ಪ), ಹೊಸ ನೆಲ್ಲೂಡಿ ಕಾಂಗ್ರೆಸ್ ಮುಖಂಡರು   ಸೋಮನಗೌಡ, ಶೇಖರ್ ಗೌಡ, ಕರಿ ಬಸವನ ಗೌಡ, ಎಂ ವೆಂಕಟೇಶ್ವರ ರೆಡ್ಡಿ, ಜರ್ನಾಧನ್ ಗೌಡ, ಮಂಜುನಾಥ್ ಗೌಡ, ಸಣ್ಣ ಹುಲುಗಪ್ಪ, ಗ್ರಾಮ ಪಂಚಾಯತಿ ಸದಸ್ಯ ಕೆ.ಉಮೇಶ್, ನಾರಾಯಣ ರೆಡ್ಡಿ, ಕಾರ್ಯಕರ್ತರಾದ ರವಿಚಂದ್ರ, ಅಗಸರ ಈರಣ್ಣ,  ನಾಯಕ ಉಮೇಶ್, ಯುವಕರಾದ  ಯುವರಾಜ್ ಮಲ್ಲಿಕಾರ್ಜುನ ಗೌಡ, ಸೇರಿದಂತೆ ಇತರರು ಉಪಸ್ಥಿತರಿದ್ದರು‌.

Previous Post Next Post

AD

 


Contact For News&Ads

Siddi TV

Contact Form

f="https://unpkg.com/video.js/dist/video-js.css" rel="stylesheet">