ನೇಹಾ ಹಿರೇಮಠ ಕೊಲೆ ಪ್ರಕರಣ : ಕಂಪ್ಲಿಯಲ್ಲಿ ಬಿಜೆಪಿ ಪ್ರತಿಭಟನೆ
ಕಂಪ್ಲಿ:
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ.
ಯೆಸ್ ವೀಕ್ಷಕರೇ, ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್ ನಲ್ಲಿ ನೇಹಾಳನ್ನ ಬರೋಬ್ಬರಿ 10 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ ಪಾಗಲ್ ಪ್ರೇಮಿ ಫಯಾಜ್ ನನ್ನು ಗಲ್ಲಿಗೇರಿಸಿ ಇಲ್ಲ ಎನ್ ಕೌಂಟರ್ ಮಾಡಿ ಎಂದು ರಾಜ್ಯದೆಲ್ಲೇಡೆ ಪ್ರತಿಭಟನೆ ಕೂಗು ಜೋರಾಗಿದೆ.
ಆದರಂತೆ ಇಂದು ಕಂಪ್ಲಿಯ ಅಂಬೇಡ್ಕರ್ ಸರ್ಕಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿ, ನೇಹಾಳ ಕೊಲೆಗೈದ ಆರೋಪಿಯನ್ನು ಗಲ್ಲಿಗೇರಿಸಿ ನೇಹಾಳ ಆತ್ಮಕ್ಕೆ ಶಾಂತಿ ಕೊಡಿಸಿ ಎಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿದರು.
ಇನ್ನು ಈ ಪ್ರತಿಭಟನೆಯಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.
ರಘುವೀರ್, ಸಿದ್ದಿ ಟಿವಿ, ಕಂಪ್ಲಿ