ಕಂಪ್ಲಿ :
ಅಹಿಂಸೆ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಬ್ರಹ್ಮಚರ್ಯ (ಪರಿಶುದ್ಧತೆ) ಮತ್ತು ಅಪರಿಗ್ರಹ (ಅನುಬಂಧ) ವಚನಗಳನ್ನು ಪಾಲಿಸುವುದು ಆಧ್ಯಾತ್ಮಿಕ ವಿಮೋಚನೆಗೆ ಅಗತ್ಯವೆಂದು ಜಗತ್ತಿಗೆ ಬೋಧಿಸಿದರು ಮಹಾವೀರರಾಗಿದ್ದಾರೆ ಎಂದು ಜೈನ್ ಸಮಾಜದ ಅಧ್ಯಕ್ಷ ಜೆವಾರಿ ಲಾಲ್ ಬಾಗ್ರೆಚಾ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ಜೈನ್ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀಮಹಾವೀರ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು
ಪ್ರತಿಯೊಬ್ಬರು ಮಹಾವೀರರ ತತ್ವಾದರ್ಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಜಯಂತಿಯ ಅಂಗವಾಗಿ ಬೆಳಗಿನ ಜಾವ ಮಹಾವೀರರ ಪ್ರತಿಮೆಗೆ ಅಭಿಷೇಕ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಜೈನ ದೇವಸ್ಥಾನದಿಂದ ವಿವಿಧ ಮುಖ್ಯ ರಸ್ತೆಗಳ ಮಾರ್ಗವಾಗಿ ಮಹಾವೀರರ ಭಾವಚಿತ್ರದ ಅದ್ದೂರಿ ಮೆರವಣಿಗೆ ಜರುಗಿತು. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಅರ್ಪಿಸಿ, ಪ್ರಾರ್ಥನೆ ನಡೆಸಿದರು.
ಈ ಸಂದರ್ಭದಲ್ಲಿ ಸಮಾಜ ಮುಖಂಡರಾದ ಪಾರಸ್ ಮಲ್ ಹುಂಡಿಯಾ, ಗೌತಮ್ ರಾಂಕಾ, ಜೆರಾವಾರ್ ಮಲ್ ಬಾಗ್ರೆಚಾ, ಅಮೃತ್ ಲಾಲ್ ದಾತೆವಾಡಿಯ, ಪತ್ತೆ ಕುಮಾರ್ ಬಾಬು ಸೇರಿದಂತೆ ಜೈನ್ ಸಮಾಜದವರಿದ್ದರು.
Tags
ಟಾಪ್ ನ್ಯೂಸ್