ತಾಲೂಕು ಪಂಚಾಯಿತಿ ಕಂಪ್ಲಿ ವತಿಯಿಂದ ಚುನಾವಣೆ ಪರ್ವ ದೇಶದ ಗರ್ವ ಎನ್ನುವ ಚುನಾವಣೆ ಆಯೋಗದ ಸಂದೇಶದೊಂದಿಗೆ ಕಂಪ್ಲಿ ತಾಲೂಕಿನ ಪುರಸಭೆ ಕಚೇರಿ ಆವರಣದಲ್ಲಿ, ಪಂಜಿನ ಮೆರವಣಿಗೆ ಜಾತಕ್ಕೆ ಕಾರ್ಯಕ್ರಮ ಆಯೋಜಿಸಲಾಯಿತು.
ಸದರಿ ಪಂಜನ ಮೆರವಣಿಗೆ ಅಂಬೇಡ್ಕರ್ ಸರ್ಕಲ್ ನಿಂದ ಪ್ರಾರಂಭವಾಗಿ, ನಡವಲ ಮಸೀದಿ,ತರಕಾರಿ ಮಾರುಕಟ್ಟೆ, ಸಣಾಪುರ್ ರಸ್ತೆ, ಶ್ರೀ ಸತ್ಯನಾರಾಯಣಪೇಟೆ, ಶಿಬಿರದಿನ್ನಿ, ನಂ10 ಮುದ್ದಾಪುರ, ಮಾರ್ಗವಾಗಿ, ಹೊಸಪೇಟೆ ರಸ್ತೆಯಿಂದ ಅಂಬೇಡ್ಕರ್ ಸರ್ಕಲ್ ವರೆಗೆ ಮರಳಿ ಬಂದು ಮುಕ್ತಾಯಗೊಳಿಸಲಾಯಿತು.
ಇನ್ನು ಈ ಕಾರ್ಯಕ್ರಮದಲ್ಲಿ ಕಂಪ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.